ಕೊಪ್ಪ

"ಕರ್ಕಾಟಕ ಚಿಕಿತ್ಸಾ ಶಿಬಿರ" ಆರಂಭ

ಕರ್ಕಾಟಕ ಚಿಕಿತ್ಸೆಯಿಂದ ಹಲವು‌ ರೋಗಿಗಳ ನಿವಾರಣೆ ಸಾಧ್ಯ .ತಜ್ಞ ವೈಧ್ಯರಿಂದ ಉಚಿತ ಸಮಾಲೋಚನೆ ಮತ್ತು ರಿಯಾಯಿತಿ ದರದಲ್ಲಿ ಚಿಕಿತ್ಸೆ.

avatar

  • July 17, 2025
  • 1 minute read
  • 2 Likes
  • 501 Views
"ಕರ್ಕಾಟಕ ಚಿಕಿತ್ಸಾ ಶಿಬಿರ" ಆರಂಭ
"ಕರ್ಕಾಟಕ ಚಿಕಿತ್ಸಾ ಶಿಬಿರ" ಆರಂಭ

ಎ.ಎಲ್.ಎನ್.ರಾವ್ ಆಯುರ್ವೇದ ಆಸ್ಪತ್ರೆ ಕೊಪ್ಪ ಇಲ್ಲಿ ಗುರುವಾರ ಜುಲೈ 17ರಂದು ಪಂಚಕರ್ಮ‌ ವಿಭಾಗದ ವತಿಯಿಂದ ಕರ್ಕಾಟಕ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಲಾಯಿತು. ಬೆಳಿಗ್ಗೆ ಆಯುರ್ವೇದ ಕಾಲೇಜಿನ ಉಪಪ್ರಾಂಶುಪಾಲರು ಮತ್ತು ಪಂಚಕರ್ಮ ವಿಭಾಗದ ವೈಧ್ಯರು ,ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು ಮತ್ತು ವೈದ್ಯಕೀಯ ವಿಧ್ಯಾರ್ಥಿಗಳ ಸಮ್ಮುಖದಲ್ಲಿ ದೀಪ ಬೆಳಗಿಸಿ ಈ ವಿಶೇಷ ಶಿಬಿರಕ್ಕೆ ಚಾಲನೆ ನೀಡಲಾಯಿತು. ಈ ಶಿಬಿರವು ಒಂದು ತಿಂಗಳ ಕಾಲ ನಡೆಯಲಿದೆ ಮತ್ತು ಈ ಚಿಕಿತ್ಸೆಯನ್ನು ಪಡೆಯುವವರಿಗೆ ರಿಯಾಯಿತಿ ದರದಲ್ಲಿ ಪಂಚಕರ್ಮ ಚಿಕಿತ್ಸೆ ನೀಡಲಾಗುವುದು ಹಾಗೂ ತಪಾಸಣೆ ಉಚಿತವಾಗಿ ನೀಡಲಾಗುತ್ತದೆ ಎಂದು ಪಂಚಕರ್ಮ ‌ವಿಭಾಗದ ವೈಧ್ಯರಾದ ಡಾ ಶೋಭಾ ಬಿ.ಕೆ.ತಿಳಿಸಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಆಸ್ಪತ್ರೆಯ  ಆಡಳಿತ ಮಂಡಳಿ ಮತ್ತು ವೈಧ್ಯರು ತಿಳಿಸಿದ್ದಾರೆ.