ಕೊಪ್ಪ

ಕೊಪ್ಪ ಬಳಿ ಭೀಕರ ರಸ್ತೆ ಅಪಘಾತ

ಕೊಪ್ಪ ಬಳಿ ಭೀಕರ ರಸ್ತೆ ಅಪಘಾತ 30 ಜನರು ಅದೃಷ್ಟ ವಶಾತ್ ಪಾರು.

avatar

  • June 13, 2025
  • 1 minute read
  • 4 Likes
  • 1330 Views
ಕೊಪ್ಪ ಬಳಿ ಭೀಕರ ರಸ್ತೆ ಅಪಘಾತ
ಕೊಪ್ಪ ಬಳಿ ಭೀಕರ ರಸ್ತೆ ಅಪಘಾತ

ಕೊಪ್ಪದ ಹಿರೀಕೆರೆ ಬಳಿ ಕೆ.ಎಸ್.ಆರ್.ಟಿ.ಸಿ .ಬಸ್ ಮತ್ತು ಸ್ವಿಫ್ಟ್ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರಿನ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಕಾರಿನಲ್ಲಿ ಇದ್ದ ಮಹಿಳೆ ಮತ್ತು ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಕೊಪ್ಪ ಕಡೆಯಿಂದ ಶೃಂಗೇರಿ ಕಡೆಗೆ ತೆರಳುತ್ತಿದ್ದ ಕಾರು ತಿರುವಿನಲ್ಲಿ   ಸಂಪೂರ್ಣವಾಗಿ ಬಲಭಾಗಕ್ಕೆ ಬಂದ ಕಾರಣ ಶೃಂಗೇರಿ ಕಡೆಯಿಂದ ತರೀಕೆರೆಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಕಾರನ್ನು ತಪ್ಪಿಸಲು ಪ್ರಯತ್ನಿಸಲು ಹೋಗಿ ಎಡ ಭಾಗದಲ್ಲಿ ಇದ್ದ ಕರೆಂಟ್ ಕಂಬಕ್ಕೆ ಗುದ್ದಿ ಬಸ್ ಚರಂಡಿಗೆ ಹೋಗಿದ್ದು, ಕರೆಂಟ್ ಕಂಬ ಸಂಪೂರ್ಣವಾಗಿ ಮುರಿದು ಬಸ್ ಮೇಲೆ ಬಿದ್ದಿದ್ದು, ಆ ಸಮಯದಲ್ಲಿ ಕರೆಂಟ್ ಇಲ್ಲದ ಕಾರಣ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ,ಸುಮಾರು 30 ಮಂದಿಯ ಪ್ರಾಣ ಉಳಿದಿದೆ. ಬಸ್ ನಲ್ಲಿ ಇದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಚಾಲಕ ಮತ್ತು ನಿರ್ವಾಹಕರು ತಿಳಿಸಿದ್ದಾರೆ. ಚಾಲನೆ ಮಾಡುವಾಗ ಮಳೆಗಾಲದಲ್ಲಿ ಜಾಗೃತೆಯಿಂದ ಚಲಿಸಬೇಕೆ ಎಂದು ಸ್ಥಳದಲ್ಲಿ ಇದ್ದ ಪೋಲಿಸರು ಮನವಿ ಮಾಡಿದರು.