ಕೊಪ್ಪ

ಕೊಪ್ಪ ತಾಲ್ಲೂಕು ಕಛೇರಿ ದುರಸ್ತಿ ಅಪಾಯಕಾರಿ

ಕೊಪ್ಪ ತಾಲ್ಲೂಕು ಕಛೇರಿ ದುರಸ್ತಿ ಕಾರ್ಯ ‌ಅಪಾಯಕಾರಿ.ತಲೆಕೆಡಿಸಿಕೊಳ್ಳದ ಆಡಳಿತ ವ್ಯವಸ್ಥೆ.

avatar

  • June 15, 2025
  • 1 minute read
  • 4 Likes
  • 581 Views
ಕೊಪ್ಪ ತಾಲ್ಲೂಕು ಕಛೇರಿ ದುರಸ್ತಿ ಅಪಾಯಕಾರಿ
ಕೊಪ್ಪ ತಾಲ್ಲೂಕು ಕಛೇರಿ ದುರಸ್ತಿ ಅಪಾಯಕಾರಿ

ಕೊಪ್ಪ ತಾಲ್ಲೂಕು ಆಡಳಿತಸೌಧ ದುರಸ್ತಿ ಅಪಾಯಕಾರಿ

ಕೊಪ್ಪ ತಾಲ್ಲೂಕು ಆಡಳಿತಸೌಧ ಸಧ್ಯ ರಿಪೇರಿ ಕಾಮಗಾರಿ ಆರಂಭಗೊಂಡಿದ್ದು, ಇದೇ ಕಟ್ಟಡ ಒಳಭಾಗದಲ್ಲೇ ವ್ಯವಹಾರಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳು ನಡೆಯುತ್ತಿರುವುದು ಸಾರ್ವಜನಿಕರಿಗೆ ಹಾಗೂ ಆಡಳಿತ ಕೆಲಸ ನಿರ್ವಹಿಸುವ ಅಧಿಕಾರಿ ವರ್ಗದವರಿಗೂ ಜೀವಭಯದ ವಾತಾವರಣ ಸೃಷ್ಟಿಸಿದೆ.
ಕಟ್ಟಡದ ರೂಪ ಬದಲಾವಣೆಗೆ ಹಳೆಯ ಅವಶೇಷಗಳನ್ನು ಕಿತ್ತು ತೆಗೆಯಲು ಉಪಯೋಗಿಸುತ್ತಿರುವ ಯಂತ್ರಗಳಿಂದಾಗುತ್ತಿರುವ ಭಾರೀ ಶಬ್ದಗಳಿಂದ ಮತ್ತು ಧೂಳಿನಿಂದಾಗಿ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ. ಹಿರಿಯ ನಾಗರೀಕರಿಗೆ ಶಬ್ದ-ಧೂಳಿನಿಂದಾಗಿ ಕಛೇರಿ ಪ್ರವೇಶಿಸುವುದೇ ದುಸ್ತರವಾಗಿದೆ. ಸಂಬಂಧಿಸಿದವರು ಪ್ರಾಣ ಹಾನಿಯಾಗುವ ಮುನ್ನ ಎಚ್ಚೆತ್ತು ತಾತ್ಕಾಲಿಕವಾಗಿ ಬದಲಿ ವ್ಯವಸ್ಥೆ ಕಲ್ಪಿಸುವುದು ಸೂಕ್ತ.ಈಗಾಗಲೇ ಇದರ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸಿ.ಆರ್.ರಮೇಶ್ ಅವರು ತಾಲ್ಲೂಕು ದಂಡಾಧಿಕಾರಿಗಳಿಗೆ ಲಿಖಿತ ಮನವಿ ಸಹ ಕೊಟ್ಟಿದ್ದಾರೆ. ಆದರೂ ಸಹ ಆಡಳಿತ ವ್ಯವಸ್ಥೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಅವರು ಪ್ರತಿಕ್ರಿಯೆ ನೀಡಿದರು. ಆದಷ್ಟೂ ಬೇಗ ಇದರ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸಾರ್ವಜನಿಕರ ಅಭಿಪ್ರಾಯ.

Gallery