ಕೊಪ್ಪ

"ಮತ್ತೆ ಬಂತು ಕೊರೋನ " ಕರ್ನಾಟಕದಲ್ಲಿ ಎಚ್ಚರ"

ಕೊರೋನ ಮತ್ತೊಮ್ಮೆ ಮರುಜೀವ ಕರ್ನಾಟಕದಲ್ಲಿ ಮೊದಲ ಬಲಿ

avatar

  • May 24, 2025
  • 1 minute read
  • 2 Likes
  • 329 Views
"ಮತ್ತೆ ಬಂತು ಕೊರೋನ " ಕರ್ನಾಟಕದಲ್ಲಿ ಎಚ್ಚರ"
"ಮತ್ತೆ ಬಂತು ಕೊರೋನ " ಕರ್ನಾಟಕದಲ್ಲಿ ಎಚ್ಚರ"

ಕಳೆದ 5 ವರ್ಷಗಳ ಹಿಂದೆ ಇಡೀ ವಿಶ್ವವನ್ನೇ ಕಾಡಿದ್ದ ಕೊರೋನ ಎಂಬ ಮಹಾಮಾರಿ ವೈರಾಣು ಮತ್ತೆ ಇನ್ನೊಮ್ಮೆ ಮರುಜೀವ ಪಡೆದುಕೊಂಡಿದ್ದು, ದೇಶಾದ್ಯಂತ ಒಂದೇ ದಿನ 500 ಕ್ಕೂ ಹೆಚ್ಚು ಕೇಸ್ ವರದಿಯಾಗಿದೆ. ಕರ್ನಾಟಕದಲ್ಲಿ 38 ಕೇಸ್ ದಾಖಲಾಗಿದ್ದು, ಮರು ಜೀವ ಪಡೆದ ಕೊರೋನ ಮಹಾಮಾರಿಗೆ ಒಂದು ಜೀವ ಮೊದಲ ಬಲಿಯಾಗಿದೆ. ಕರ್ನಾಟಕದ ಮುಖ್ಯ ಮಂತ್ರಿಗಳು ಸಹ ಇಂದಿನಿಂದಲೇ ಮಾಸ್ಕ್ ಧರಿಸಿ ಕಾರ್ಯಕ್ರಮಕ್ಕೆ ಹಾಜರಾಗಿದ್ದು, ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರಲು ಮನವಿ‌ ಮಾಡಿದ್ದಾರೆ. ನಾಳೆಯಿಂದ ರಾಜ್ಯದ ಎಂಡು ಕಡೆಗಳಲ್ಲಿ ಕೊರೋನ ಟೆಸ್ಟ್ ನಡೆಸಲು ಸರ್ಕಾರ ತೀರ್ಮಾನಿಸಿದೆ. ಆರೋಗ್ಯ ಇಲಾಖೆ ಸಹ ಜನರು ಹೆಚ್ಚು ಹೆಚ್ಚು ಒಟ್ಟುಗೂಡುವುದನ್ನು ಕಡಿಮೆ ಮಾಡಲು ಸೂಚಿಸಿದ್ದು, ಒಟ್ಟಾರೆ ಮತ್ತೊಮ್ಮೆ ನಮ್ಮ ಜೀವಕ್ಕೆ ನಾವೇ ಕುತ್ತು ತಂದು ಕೊಳ್ಳದೆ ಆರೋಗ್ಯ ಕಾಪಾಡಿಕೊಳ್ಳುವುದು ಉತ್ತಮ. ಸಾರ್ವಜನಿಕರು ಆದಷ್ಟು ಎಚ್ಚರಿಕೆಯಿಂದ ಇರಲು ಕಳಕಳಿಯ ಮನವಿ.

Gallery