ಕೊಪ್ಪ ಚಿಕ್ಕಮಗಳೊರು

ನಾಳೆ ಚಿಕ್ಕಮಗಳೂರು ಜಿಲ್ಲೆ ಸಂಪೂರ್ಣ ಬಂದ್

ಕೊಪ್ಪದಲ್ಲಿ ಸಹ ಸೋಮವಾರ ಬಂದ್ ಗೆ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳವು ಕರೆ ನೀಡಿದ್ದಾರೆ.

avatar

  • May 4, 2025
  • 1 minute read
  • 2 Likes
  • 363 Views
ನಾಳೆ ಚಿಕ್ಕಮಗಳೂರು ಜಿಲ್ಲೆ ಸಂಪೂರ್ಣ ಬಂದ್
ನಾಳೆ ಚಿಕ್ಕಮಗಳೂರು ಜಿಲ್ಲೆ ಸಂಪೂರ್ಣ ಬಂದ್

ದಿನಾಂಕ 5-5-2025 ರಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಚಿಕ್ಕಮಗಳೂರು ಜಿಲ್ಲಾ ಬಂದ್ ಗೆ ಕರೆ ನೀಡಿದ್ದು, ಕೊಪ್ಪ ದಲ್ಲೂ ಸಹ ಬಂದ್ ಗೆ  ಕೊಪ್ಪ ಘಟಕದಿಂದ ಮನವಿ ಮಾಡಿದ್ದು, ಕೊಪ್ಪ ನಗರದಲ್ಲಿ ಇಂದು ಕರಪತ್ರ ನೀಡಿ ಸ್ವಯಂ ಪ್ರೇರಿತ ವಾಗಿ ಅಂಗಡಿ ಮುಂಗಟ್ಟು ಮುಚ್ಚಿ ಬಂದ್ ಗೆ ಸಹಕಾರ ನೀಡಬೇಕಾಗಿ ಕೊಪ್ಪ ಬಜರಂಗದಳದ ಪ್ರಖಂಡ ವಿನಿಯ್ ಶಿವಪುರ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಅಂಗಡಿಗಳಿಗೆ ತೆರಳಿ ಮನವಿ ಮಾಡಿದರು .ಕೊಪ್ಪ ಪಟ್ಟಣದ ವ್ಯಾಪಾರಿಗಳ ಒಕ್ಕೂಟದಿಂದ ಸಂಪೂರ್ಣ ಬೆಂಬಲ ನೀಡಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗುವುದು. ಮಂಗಳೂರಿನ ಸುಹಾಸ್ ಶೆಟ್ಟಿ ಹತ್ಯೆ ಮತ್ತು ಪಹಲ್ಗಾಮ್ ನಲ್ಲಿ ನಡೆದ ಹಿಂದೂಗಳ ಹತ್ಯೆ ಎರಡೂ ಸಹ ಮನುಕುಲಕ್ಕೆ ಆದ ಘಾಸಿಯಾಗಿದ್ದು ಈ ಎರಡೂ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಉಗ್ರ ಶಿಕ್ಷೆಗೆ ಒಳಪಡಿಸಿ ಮಂದೆ ಇಂತಹ ಘಟನೆ ನಡೆಯದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಕೊಪ್ಪ ಪಟ್ಟಣದ ವ್ಯಾಪಾರಿಗಳ ಒಕ್ಕೂಟ ಆಗ್ರಹ ಮಾಡಿ ಬಂದ್ ಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.