*ಕೊಪ್ಪ ಪೋಲಿಸ್ ಠಾಣಾಧಿಕಾರಿ ಶ್ರೀ ಬಸವರಾಜ್ ಅವರಿಂದ ಪೋಲಿಸ್ ವಾಹನಕ್ಕೆ ದಂಡ* ಕಾನೂನಿಂದ ಯಾರೂ ಹೊರತಲ್ಲ ಎಂದು ಸಾಬೀತು.

avatar

  • August 28, 2025
  • 1 minute read
  • 3 Likes
  • 712 Views
"*ಪೋಲಿಸ್ ವಾಹನಕ್ಕೆ ಬಿತ್ತು ಲಾಕ್"*
"*ಪೋಲಿಸ್ ವಾಹನಕ್ಕೆ ಬಿತ್ತು ಲಾಕ್"*

ಕೊಪ್ಪ ಪಟ್ಟಣದಲ್ಲಿ ಪೋಲಿಸ್ ವಾಹನಕ್ಕೆ ಲಾಕ್ ಹಾಕಿ ದಂಡ ವಿಧಿಸಿದ ಅಪರೂಪದ ಘಟನೆ ಗುರುವಾರ ನಡೆಯಿತು. ಪಟ್ಟಣದ ಬಸ್ ನಿಲ್ದಾಣದ ಸಮೀಪ ರಾಂಗ್ ಸೈಡ್ ಪಾರ್ಕಿಂಗ್ ಮಾಡಿದ್ದ ನರಸಿಂಹರಾಜಪುರ ಪೋಲಿಸ್‌ ಠಾಣೆಗೆ ಸೇರಿದ ಪಿಎಸ್ಐ ವಾಹನಕ್ಕೆ ಕೊಪ್ಪ ಪೋಲಿಸ್ ಸಿಬ್ಬಂದಿ ಲಾಕ್ ಅಳವಡಿಸಿ ,ದಂಡ ವಿಧಿಸುವ ಮೂಲಕ ಕಾನೂನು ಎಲ್ಲರಿಗೂ ಒಂದೇ ಎಂದು ಮತ್ತೊಮ್ಮೆ ತಿಳುವಳಿಕೆ ನೀಡಿದ್ದಾರೆ. ಕೊಪ್ಪ ಪೋಲಿಸ್ ಠಾಣಾಧಿಕಾರಿ ಶ್ರೀ ಬಸವರಾಜ್  ಅವರು ಕೊಪ್ಪ ಪಟ್ಟಣಕ್ಕೆ ಬಂದಾಗಿನಿಂದ ಕೊಪ್ಪ ಪಟ್ಟಣದ ಟ್ರಾಫಿಕ್ ವ್ಯವಸ್ಥೆ ಸರಿಪಡಿಸಲು ಅವಿರತವಾಗಿ ಶ್ರಮವಹಿಸುತ್ತಿದ್ದು, ಇದಕ್ಕೆ ಸಾರ್ವಜನಿಕ ವಲಯದಲ್ಲಿ ಸಹ ಸಹಕಾರ ವ್ಯಕ್ತವಾಗಿದೆ. ಕಳೆದವಾರವಷ್ಟೇ ಕಂದಾಯ ಇಲಾಖೆಯ ವಾಹನಕ್ಕೆ ದಂಡ ವಿಧಿಸಿ,ಕಾನೂನು ಎಲ್ಲರಿಗೂ ಒಂದೇ ಎಂದು ಸಾಬೀತು ಮಾಡಿದ್ದ ಠಾಣಾಧಿಕಾರಿ ಶ್ರೀ ಬಸವರಾಜ್ ಅವರು ಇವತ್ತು ಪೋಲಿಸ್ ಇಲಾಖೆಯು ಸಹ ಕಾನೂನಿನ ವ್ಯಾಪ್ತಿಯಲ್ಲಿ ಬರುತ್ತದೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿ ಸಾರ್ವಜನಿಕರು ಹುಬ್ಬೇರುವಂತೆ ಮಾಡಿದ್ದಾರೆ. ಇನ್ನಾದರೂ ಎಲ್ಲಾ ಸರ್ಕಾರಿ ಇಲಾಖೆಯವರು, ರಾಜಕಾರಣಿಗಳು ಮತ್ತು ಸಾರ್ವಜನಿಕರು ತಮ್ಮ ತಮ್ಮ ವಾಹನಗಳನ್ನು ಸರಿಯಾದ ರೀತಿಯಲ್ಲಿ ಪಾರ್ಕಿಂಗ್ ಮಾಡಿ ,ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ಸಹಕರಿಸುವ ಮೂಲಕ ಕಾನೂನು ಸಹ ಪಾಲಿಸಬೇಕು ಎಂದು ಠಾಣಾಧಿಕಾರಿ ಶ್ರೀ ಬಸವರಾಜ್ ಅವರು ಕಾಫಿನಾಡು ನ್ಯೂಸ್ ಗೆ ತಿಳಿಸಿದರು. ಕೊಪ್ಪ ಪಟ್ಟಣದ ಕಾನೂನು ಮತ್ತು ಸುವ್ಯವಸ್ಥೆ ಸೇರಿದಂತೆ ,ಗಣೇಶ ವಿಸರ್ಜನೆಯಲ್ಲಿ ಸಹ ದೇಶೀಯ ಆಚರಣೆ ಮಾಡುವಂತೆ ,ಮತ್ತು ಯಾವುದೇ ತರಹದ ಕಾನೂನಿನ ವಿರುದ್ಧ ಚಟುವಟಿಕೆ ಕಂಡುಬಂದಲ್ಲಿ ಕೊಪ್ಪ ಪೋಲಿಸ್ ಠಾಣೆಗೆ ಬಂದು ಮುಕ್ತವಾಗಿ ಮಾಹಿತಿ ನೀಡುವುದರ ಮೂಲಕ ಕೊಪ್ಪದ ಜನತೆ ಸಹಕರಿಸಬೇಕು ಎಂದು ಅವರು ಕರೆನೀಡಿದ್ದಾರೆ. ಇವರ ಈ ರೀತಿಯ ಸಮಾನ ಮತ್ತು ಸಾಮಾಜಿಕ ನ್ಯಾಯ ರಾಜ್ಯದ ಎಲ್ಲಾ ಕಡೆಗೆ ಮಾದರಿಯಾಗಲಿ ಎಂದು ಕೊಪ್ಪ ಸಾರ್ವಜನಿಕರ ಆಶಯ.

Gallery