*ರ್ಯಾಗಿಂಗ್ ಮಾಡಿದರೆ ಶಿಕ್ಷೆ ಖಚಿತ* :- ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಿಗೆ ಠಾಣಾಧಿಕಾರಿ ಬಸವರಾಜ್ ಕಿವಿಮಾತು:-
ಕೊಪ್ಪದ ಎ.ಎಲ್.ಎನ್.ರಾವ್. ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ರ್ಯಾಗಿಂಗ್ ವಿರುದ್ಧ ದಿನದ ಪ್ರಯುಕ್ತ ಅತಿಥಿಯಾಗಿ ಭಾಗವಹಿಸಿದ ಕೊಪ್ಪ ಪೋಲಿಸ್ ಠಾಣಾಧಿಕಾರಿ ಶ್ರೀ ಬಸವರಾಜ್ ಜಿ.ಕೆ. ಇವರು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿ ರ್ಯಾಗಿಂಗ್ ಒಂದು ಮಹಾ ಪಿಡುಗು ,ಇದು ಉನ್ನತ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಂದಲೇ ಜಾಸ್ತಿಯಾಗಿದೆ, ರ್ಯಾಗಿಂಗ್ ಗೆ ಕಿರಿಯ ವಿದ್ಯಾರ್ಥಿಗಳು ಬಲಿಯಾಗುತ್ತಿರುವುದು ಬೇಸರದ ಸಂಗತಿ ಹಾಗೂ ಹಿರಿಯ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳು ಕಾಲೇಜಿಗೆ ಅಥವಾ ಹಾಸ್ಟೆಲ್ ಗೆ ಹೊಸದಾಗಿ ಸೇರ್ಪಡೆಯಾದಾಗ ತಮ್ಮ ಕುಟುಂಬದ ಸದಸ್ಯರಂತೆ ಕಾಣಬೇಕು. ಆಗ ಈ ರ್ಯಾಗಿಂಗ್ ಎಂಬ ಒಂದು ಕ್ರೌರ್ಯ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು. ವಿದ್ಯಾರ್ಥಿಗಳು ಮೊದಲು ತಮ್ಮ ದೇಶ, ಸಂಸ್ಕೃತಿಗಳ ಕಡೆ ಗೌರವ ,ಪ್ರೀತಿ ಬೆಳೆಸಿಕೊಂಡಾಗ ರ್ಯಾಗಿಂಗ್ ನಂತಹ ಕ್ರೌರ್ಯವನ್ನು ತಡೆಗಟ್ಟಬಹುದು ಎಂದರು. ರ್ಯಾಗಿಂಗ್ ನಡೆಯದಂತೆ ತಡೆಯಲು ಬರೀ ವಿದ್ಯಾರ್ಥಿಗಳು ಮಾತ್ರ ವಲ್ಲದೆ ಸಂಬಂಧಿಸಿದ ಸಂಸ್ಥೆಯ ಜವಾಬ್ದಾರಿ ಸಹ ಮಹತ್ವವಾಗಿದೆ ಎಂದರು. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಯಾವುದೇ ರ್ಯಾಗಿಂಗ್ ನಡೆದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಜೈಲು ಶಿಕ್ಷೆ ನಿಗದಿಪಡಿಸುವುದು ಸೇರಿದಂತೆ, ಹಲವಾರು ಕಠಿಣ ಕಾನೂನು ಕ್ರಮತೆಗೆದುಕೊಳ್ಳಲು ಅವಕಾಶ ಇದೆ ಎಂದು ತಿಳಿಸಿದರು.
ಆ್ಯಂಟಿ ರ್ಯಾಗಿಂಗ್ ದಿನಾಚರಣೆ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಕಾರ್ಯಕ್ರಮದ ನಂತರ ಠಾಣಾಧಿಕಾರಿ ಶ್ರೀ ಬಸವರಾಜ್ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಿ ,ಗೌರವಿಸಲಾಯಿತು. ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದಲ್ಲಿ ಎ.ಎಲ್.ಎನ್.ರಾವ್. ಕಾಲೇಜು ಪಿ.ಜಿ ಉಪಪ್ರಾಂಶುಪಾಲರಾದ ಡಾ .ಡಿ.ಕೆ.ಮಿಶ್ರಾ, ರ್ಯಾಗಿಂಗ್ ಕಮಿಟಿಯ ಮುಖ್ಯಸ್ಥರಾದ ಡಾ .ಜಗದೀಶ್ ಮಯ್ಯ, ಡಾ ಪೂಜಾ ಹುಯಿಲಗೋಳ, ಪ್ರಾಧ್ಯಾಪಕರಾದ
ಶ್ರೀ ಪ್ರಕಾಶ್ ಸಿ.ಹೆಚ್. ,ಡಾ ಶ್ರದ್ಧಾ ಮತ್ತು ಕಾಲೇಜಿನ ಎಲ್ಲಾ ವೈದ್ಯಕೀಯ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.