Police Sringeri ಕೊಪ್ಪ ಕುದುರೆಗುಂಡಿ ಚಿಕ್ಕಮಗಳೊರು ಜಯಪುರ ತೀರ್ಥಹಳ್ಳಿ ಬಾಳೆಹೊನ್ನೂರು ಹರಿಹರಪುರ

" ರಾಷ್ಟ್ರೀಯ ಏಕತಾ ದಿನದ ಆಚರಣೆ ಅಂಗವಾಗಿ ಮ್ಯಾರಥಾನ್ "

ಕೊಪ್ಪದಲ್ಲಿ "ರಾಷ್ಟ್ರೀಯ ಏಕತಾ ದಿನದ" ಪ್ರಯುಕ್ತ ಮ್ಯಾರಥಾನ್:- ಅಕ್ಟೋಬರ್ 31 ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಪ್ರಯುಕ್ತ ದೇಶಾದ್ಯಂತ ರಾಷ್ಟ್ರೀಯ ಏಕತಾ ದಿನವನ್ನು ಆಚರಿಸಲಾಗುತ್ತದೆ, ಇದರ ಅಂಗವಾಗಿ ಐಕ್ಯತೆಯನ್ನು ಸಾರುವ ಸಲುವಾಗಿ ಕೊಪ್ಪ ಪೋಲಿಸ್ ಠಾಣೆಯಿಂದ ಮ್ಯಾರಥಾನ್ ಆಯೋಜಿಸಲಾಗಿತ್ತು.

avatar

  • October 31, 2025
  • 1 minute read
  • 2 Likes
  • 202 Views
" ರಾಷ್ಟ್ರೀಯ ಏಕತಾ ದಿನದ ಆಚರಣೆ ಅಂಗವಾಗಿ ಮ್ಯಾರಥಾನ್ "
" ರಾಷ್ಟ್ರೀಯ ಏಕತಾ ದಿನದ ಆಚರಣೆ ಅಂಗವಾಗಿ ಮ್ಯಾರಥಾನ್ "

ಕೊಪ್ಪದಲ್ಲಿ "ರಾಷ್ಟ್ರೀಯ ಏಕತಾ ದಿನದ" ಪ್ರಯುಕ್ತ ಮ್ಯಾರಥಾನ್:-
ಅಕ್ಟೋಬರ್ 31 ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಪ್ರಯುಕ್ತ ದೇಶಾದ್ಯಂತ ರಾಷ್ಟ್ರೀಯ ಏಕತಾ ದಿನವನ್ನು ಆಚರಿಸಲಾಗುತ್ತದೆ, ಇದರ ಅಂಗವಾಗಿ ಐಕ್ಯತೆಯನ್ನು ಸಾರುವ ಸಲುವಾಗಿ ಕೊಪ್ಪ ಪೋಲಿಸ್ ಠಾಣೆಯಿಂದ ಮುಖ್ಯ ರಸ್ತೆ ಮಾರ್ಗವಾಗಿ ಬಸ್ ನಿಲ್ದಾಣದ ಮುಖಾಂತರ ಸುಭಾಷ್ ರಸ್ತೆಯಲ್ಲಿ  ಬಂದು ಮತ್ತೆ ಪೋಲಿಸ್ ಠಾಣೆಯವರೆಗೆ ಮ್ಯಾರಥಾನ್ ನಡೆಸಲಾಯಿತು. ಕೊಪ್ಪ ಪೋಲಿಸ್ ಠಾಣೆ ವತಿಯಿಂದ ಆಯೋಜಿಸಲಾಗಿದ್ದ ಈ ಮ್ಯಾರಥಾನ್ ಗೆ ಕೊಪ್ಪ ಡಿ.ವೈ.ಎಸ್.ಪಿ. ಶ್ರೀ ಬಾಲಾಜಿ ಸಿಂಗ್ ಮತ್ತು ಪೋಲಿಸ್ ಠಾಣಾಧಿಕಾರಿ ಶ್ರೀ ಬಸವರಾಜ್ ಅವರು ಚಾಲನೆ ನೀಡಿದರು. ಈ ಮ್ಯಾರಥಾನ್ ನಲ್ಲಿ ಪೋಲಿಸ್ ಠಾಣಾ ಸಿಬ್ಬಂದಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು ,ಅರಣ್ಯ ಇಲಾಖೆ ಸಿಬ್ಬಂದಿಗಳು, ಹೋಮ್ ಗಾರ್ಡ್ಸ್, ಶಿಕ್ಷಣ ಇಲಾಖೆ ಮತ್ತು ವಿವಿಧ ಇಲಾಖೆ ಸೇರಿದಂತೆ ಪತ್ರಕರ್ತರು  ಮತ್ತು ಸಾರ್ವಜನಿಕರು ಸಹ ಭಾಗವಹಿಸಿದ್ದರು.

Gallery