ಚಿಕ್ಕಮಗಳೊರು ಕೊಪ್ಪ

"ಉಚಿತ ನೇತ್ರ ತಪಾಸಣಾ ಶಿಬಿರ ಯಶಸ್ವಿ"

ಎ.ಎಲ್‌.ಎನ್.ರಾವ್. ಚಾರಿಟಬಲ್ ಆಸ್ಪತ್ರೆಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು.

avatar

  • August 3, 2025
  • 1 minute read
  • 4 Likes
  • 228 Views
"ಉಚಿತ ನೇತ್ರ ತಪಾಸಣಾ ಶಿಬಿರ ಯಶಸ್ವಿ"
"ಉಚಿತ ನೇತ್ರ ತಪಾಸಣಾ ಶಿಬಿರ ಯಶಸ್ವಿ"

ಎ.ಎಲ್.ಎನ್.ರಾವ್.ಮೆಮೊರಿಯಲ್ ಚಾರಿಟೆಬಲ್ ಆಸ್ಪತ್ರೆಯಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರ ಯಶಸ್ವಿ:- 
 ನವಚೈತ್ರ ಆರೋಗ್ಯ ಕಾಳಜಿ ಶಿಬಿರದ 197 ರ ಅಂಗವಾಗಿ ಆಗಸ್ಟ್ 3 ಭಾನುವಾರದಂದು ಕೊರ್ಡಿಹಿತ್ಲುವಿನ  ಎ.ಎಲ್.ಎನ್.ರಾವ್.
ಚಾರಿಟಬಲ್ ಆಸ್ಪತ್ರೆಯಲ್ಲಿ ,ಪ್ರಸಾದ್ ನೇತ್ರಾಲಯ ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ನೇತ್ರ ಜ್ಯೋತಿ ಚಾರೀಟೆಬಲ್ ಟ್ರಸ್ಟ್ ಉಡುಪಿ ಇವರ ಸಹಯೋಗದೊಂದಿಗೆ ನಡೆದ ಉಚಿತ ನೇತ್ರ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು. ಸುಮಾರು ಜನರು ಇದರ ಸದುಪಯೋಗ ಪಡೆದುಕೊಂಡರು. ಆರು ಜನರಿಗೆ ಉಚಿತ ಶಸ್ತ್ರ ಚಿಕಿತ್ಸೆ ಪ್ರಯುಕ್ತ ಉಡುಪಿಯ ಪ್ರಸಾದ್ ನೇತ್ರಾಲಯಕ್ಕೆ ಕರೆದುಕೊಂಡು ಹೋಗಲಾಯಿತು.ಶಿಬಿರದಲ್ಲಿ ಉಚಿತವಾಗಿ ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ನಡೆಸಲಾಯಿತು. ಭಾನುವಾರ ಬೆಳಿಗ್ಗೆ ಆಸ್ಪತ್ರೆಯ ಆಡಳಿತ ವೈಧ್ಯಾಧಿಕಾರಿ ಡಾ ಹರೀಶ್ ದೇಶಪಾಂಡೆ ಮತ್ತು ಪಂಚಕರ್ಮ ವಿಭಾಗದ ವೈದ್ಯರಾದ ಡಾ : ಪೂಜಾ ಹುಯಿಲಗೋಳ ಇವರ ಉಪಸ್ಥಿತಿಯಲ್ಲಿ ಶಿಬಿರದ ಉದ್ಘಾಟನೆ ಮಾಡಲಾಯಿತು. ಎ.ಎಲ್.ಎನ್.ರಾವ್ ಚಾರಿಟಬಲ್ ಆಸ್ಪತ್ರೆಯ ಎಮ್.ಡಿ.ಶ್ರೀ ಆರೂರ್ ರಮೇಶ್ ರಾವ್ ಮತ್ತು ಟ್ರಸ್ಟಿಗಳಾದ ಶ್ರೀ ಮತಿ ನಮಿತಾ ರಾವ್ ಅವರ ಪ್ರೋತ್ಸಾಹದೊಂದಿಗೆ ಮತ್ತು ನುಗ್ಗಿ ಗ್ರಾಮ ಪಂಚಾಯತಿ ಅಧ್ಯಕ್ಷರು ,ಉಪಾಧ್ಯಕ್ಷರು ಮತ್ತು ಸದಸ್ಯರ ಸಹಕಾರದಿಂದ ಉಚಿತ ನೇತ್ರ ತಪಾಸಣಾ ಶಿಬಿರ ಬಹಳ ಅಚ್ಚು ಕಟ್ಟಾಗಿ ನಡೆಯಿತು.ಈ ಶಿಬಿರದಲ್ಲಿ ಪ್ರಸಾದ್ ನೇತ್ರಾಲಯದ ವೈಧ್ಯರು, ಸಹಾಯಕರು , ಮತ್ತು ನವಚೈತ್ರ ವೇದಿಕೆಯ ಚೇತನ್, ಸಾಧಿಕ್ ,ಇನ್ನಿತರ ಸದಸ್ಯರು, ಎ.ಎಲ್.ಎನ್ ರಾವ್.ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.