ಕೊಪ್ಪದ ಎ.ಎಲ್.ಎನ್.ರಾವ್.ಆಯುರ್ವೇದ ಆಸ್ಪತ್ರೆ ಯಲ್ಲಿ ಗುರುವಾರ ದಿನಾಂಕ 4-12-2025 ರಂದು ಮಾರ್ಗಶಿರ ಹುಣ್ಣುಮೆ ಪ್ರಯುಕ್ತ ಬಾಳೇಹಣ್ಣಿನ ವಿಶೇಷ ಔಷಧ ವಿತರಣೆ ಮಾಡಲಾಗುತ್ತದೆ. ಇದನ್ನು ಕಾಯಚಿಕಿತ್ಸಾ ವಿಭಾಗದಿಂದ ಆಯೋಜಿಸಲಾಗಿದ್ದು, ಇದನ್ನು ಮುಂಜಾನೆ ಒಂದು ಬಾರಿ ಸೇವಿಸುವುದರಿಂದ ಅಸ್ತಮಾ ,ಶೀತ ,ನೆಗಡಿ ,ಶ್ವಾಸಕೋಶ ಮತ್ತು ಅಲರ್ಜಿಯಂತ ಕಾಯಿಲೆಗಳಿಗೆ ಖಾಯಂ ಮುಕ್ತಿ ದೊರಕುವುದಾಗಿ ಕಾಯಚಿಕಿತ್ಸಾ ವಿಭಾಗದ ಡಾ ಅಶ್ವಿನಿ ಎಸ್.ಜಿ.ಅವರು ತಿಳಿಸಿದ್ದಾರೆ. ಔಷಧ ಪಡೆಯುವವರು ದಿನಾಂಕ 3-12-2025 ಬುಧವಾರ ಸಂಜೆ 4:00 ಗಂಟೆ ಒಳಗೆ ಮುಂಚಿತವಾಗಿ ಆಸ್ಪತ್ರೆಗೆ ಬಂದು ಅಥವಾ ದೂರವಾಣಿ ಮುಖಾಂತರ ರೂ 50/- ನೊಂದಣಿ ಶುಲ್ಕ ಪಾವತಿಸಿ ನೊಂದಣಿ ಮಾಡಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ದೂರವಾಣಿ ಸಂಖ್ಯೆ:- 7022181339
ಔಷಧ ವಿತರಣೆ ಗುರುವಾರ ದಿನಾಂಕ
4-12-2025 ಬೆಳಿಗ್ಗೆ 6 ರಿಂದ 7 ಗಂಟೆ ವರೆಗೆ ಇರುತ್ತದೆ.