2024ನೇ ಸಾಲಿನ ರಾಜ್ಯ ‘ನೀಲ ಗಂಗಾ ದತ್ತಿ ಪ್ರಶಸ್ತಿ ಗೆ ಎಸ್. ಎನ್. ಚಂದ್ರಕಲಾ ಕೊಪ್ಪ ಅವರು ಭಾಜನರಾಗಿದ್ದಾರೆ.
21 ನೇ ಮಾರ್ಚ್ 2025ರಂದು ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ ಮಂದಿರದಲ್ಲಿ ಜರುಗಿದ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕೊಪ್ಪ ತಾಲೂಕು ದರ್ಶನ, ಚಿಲಿಪಿಲಿ, ಜ್ಞಾನ ದೀಪ್ತಿ, ಚಿರಂತನ ಹೀಗೆ ಈವರೆಗೆ 17ಕೃತಿಗಳು, ಸುಧಾ, ಮಂಗಳ, ಕರ್ಮವೀರ ಮೊದಲಾದ ನಿಯತಕಾಲಿಕೆ ಗಳಲ್ಲಿ 2000 ಕ್ಕು ಹೆಚ್ಚಿನ ಲೇಖನಗಳು ಪ್ರಕಟವಾಗಿವೆ.ಆಕಾಶ ವಾಣಿ, ಸಾಹಿತ್ಯ ಗೋಷ್ಠಿ ಗಳು ಹಾಗೂ ಇನ್ನಿತರ ಸಮಾರಂಭಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ1500 ಕ್ಕು ಹೆಚ್ಚಿನ ಉಪನ್ಯಾಸಗಳನ್ನು ನೀಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಈವರೆಗೆ ನೀಲ ಗಂಗಾ ರಾಜ್ಯ ದತ್ತಿ ಪ್ರಶಸ್ತಿ ಬಂದಿರುವುದು ಇಬ್ಬರಿಗೆ ಮಾತ್ರ.