ಕೊಪ್ಪ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಅಂಬ್ಯುಲೇನ್ಸ್ ಸೇವೆ ಸ್ಥಗಿತಗೊಂಡ ಬಗ್ಗೆ ಕಳೆದ ವಾರ ಕಾಫಿನಾಡು ನ್ಯೂಸ್ ನಲ್ಲಿ ವರದಿ ಪ್ರಕಟವಾಗಿತ್ತು.

avatar

  • December 31, 2025
  • 1 minute read
  • 1 Like
  • 173 Views
ಕೊಪ್ಪ 108 ಅಂಬ್ಯುಲೆನ್ಸ್ ಸೇವೆ ಪುನಃ ಆರಂಭ
ಕೊಪ್ಪ 108 ಅಂಬ್ಯುಲೆನ್ಸ್ ಸೇವೆ ಪುನಃ ಆರಂಭ

" ಕೊಪ್ಪ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಅಂಬ್ಯುಲೇನ್ಸ್ ಸೇವೆ ಸ್ಥಗಿತಗೊಂಡ ಬಗ್ಗೆ ಕಳೆದ ವಾರ ಕಾಫಿನಾಡು ನ್ಯೂಸ್ ನಲ್ಲಿ ವರದಿ ಪ್ರಕಟವಾಗಿತ್ತು. ಬಡವರಿಗೆ ,ಸಾರ್ವಜನಿಕರಿಗೆ ತುರ್ತಾಗಿ ಸೇವೆ ನೀಡುತ್ತಿದ್ದ ಅಂಬ್ಯುಲೇನ್ಸ್ ಸೇವೆ  ನಿಂತು ಹೋದ ಬಗ್ಗೆ ಆಟೋ ಸಂಘದ ಗೌರವಾಧ್ಯಕ್ಷ ಹೆಚ್.ಆರ್ ಜಗದೀಶ್ ತೀವ್ರ ಆಕ್ರೋಶ ಹೊರಹಾಕಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದರು. ಕಾಫಿನಾಡು ನ್ಯೂಸ್ ವರದಿ ಬಳಿಕ ಎಚ್ಚೆತ್ತ ಆಸ್ಪತ್ರೆಯ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಅಂಬ್ಯುಲೇನ್ಸ್ ಸೇವೆ ಪುನಃ ಆರಂಭಿಸಲು ಕ್ರಮ ಕೈಗೊಂಡಿದ್ದು, ಸಾರ್ವಜನಿಕರಿಗೆ ಇದರ ಉಪಯೋಗ ಆಗಲಿದೆ. ಇನ್ನು ಮುಂದಾದರು ಈ ತರಹ ಅಂಬುಲೇನ್ಸ್ ಸೇವೆಯು ವ್ಯತ್ಯಯವಾಗದಂತೆ ಮುನ್ನೆಚ್ಚರಿಕೆ ವಹಿಸಲು ಸಾರ್ವಜನಿಕರು ಮನವಿ‌ ಮಾಡಿದ್ದು, ಈ ಬಗ್ಗೆ ಗಮನ ಸೆಳೆದ  ಕಾಫಿನಾಡು ನ್ಯೂಸ್‌ ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.