ಕೊಪ್ಪ ಕುದುರೆಗುಂಡಿ Sringeri ಚಿಕ್ಕಮಗಳೊರು ಜಯಪುರ ಬಾಳೆಹೊನ್ನೂರು

*ಸೇವೆಗೆ ಸಿಗದ ಅಂಬುಲೇನ್ಸ್* ಸಾರ್ವಜನಿಕರ ಪರದಾಟ

ಕೊಪ್ಪ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತು ಸೇವೆಗೆ ಇರುವ 108 ಅಂಬ್ಯುಲೇನ್ಸ್ ವಾಹನ ಕಾರ್ಯ ನಿರ್ವಹಿಸದೆ ಕೆಟ್ಟು ನಿಂತಿದೆ. ಬಡವರಿಗೆ ,ಸಾರ್ವಜನಿಕರಿಗೆ ತುರ್ತು‌ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆ ನೀಡಲು ಕರೆತರಬೇಕಾದ ಈ ಅಂಬ್ಯುಲೇನ್ಸ್ ಸೇವೆ ಸಾರ್ವಜನಿಕರಿಗೆ ಸಿಗದೆ ಪರದಾಡುವಂತಾಗಿದೆ.

avatar

  • December 28, 2025
  • 1 minute read
  • 1 Like
  • 347 Views
*ಸೇವೆಗೆ ಸಿಗದ ಅಂಬುಲೇನ್ಸ್* ಸಾರ್ವಜನಿಕರ ಪರದಾಟ
*ಸೇವೆಗೆ ಸಿಗದ ಅಂಬುಲೇನ್ಸ್* ಸಾರ್ವಜನಿಕರ ಪರದಾಟ

" ಕೊಪ್ಪ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತು ಸೇವೆಗೆ ಇರುವ 108 ಅಂಬ್ಯುಲೇನ್ಸ್ ವಾಹನ ಕಾರ್ಯ ನಿರ್ವಹಿಸದೆ ಕೆಟ್ಟು ನಿಂತಿದೆ. ಬಡವರಿಗೆ ,ಸಾರ್ವಜನಿಕರಿಗೆ ತುರ್ತು‌ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆ ನೀಡಲು ಕರೆತರಬೇಕಾದ ಈ ಅಂಬ್ಯುಲೇನ್ಸ್ ಸೇವೆ ಸಾರ್ವಜನಿಕರಿಗೆ ಸಿಗದೆ ಪರದಾಡುವಂತಾಗಿದೆ. ಈ ಬಗ್ಗೆ ಕೊಪ್ಪ ಸಾರ್ವಜನಿಕ ಆಸ್ಪತ್ರೆಗೆ ಭಾನುವಾರ ಬೇಟಿ ನೀಡಿದ ಶೃಂಗೇರಿ ಆಟೋಚಾಲಕರ ಸಂಘದ ಗೌರವಾಧ್ಯಕ್ಷ ಹೆಚ್. ಆರ್ ಜಗದೀಶ್ ಮತ್ತು ತಂಡ ಆಸ್ಪತ್ರೆಯಲ್ಲಿ ವಿಚಾರಿಸಿ ನೋಡಿದರೆ ಯಾವುದೇ ರೀತಿಯ ಸ್ಪಷ್ಟೀಕರಣ ಸಿಗದೆ ಆಸ್ಪತ್ರೆಯ ಆಡಳಿತ ಬೇಜವಾವ್ದಾರಿ ತೋರಿದೆ .ತಕ್ಷಣವೇ ಇದರ ಬಗ್ಗೆ ಗಮನಹರಿಸಿ ಸಾರ್ವಜನಿಕರಿಗೆ ಮತ್ತು ಬಡವರಿಗೆ ಇರುವ ಈ 108 ಅಂಬ್ಯುಲೇನ್ಸ್ ಸೇವೆ ಸರಿಪಡಿಸಲು ಸ್ಥಳೀಯ ಶಾಸಕರು ,ಜನಪ್ರತಿನಿಧಿಗಳು, ಡಿ.ಹೆಚ್.ಓ. ,ತಾಲ್ಲೂಕು ವೈದ್ಯಾಧಿಕಾರಿಗಳು ಮತ್ತು ಆಸ್ಪತ್ರೆಯ ಆಡಳಿತ ಮಂಡಳಿ ಕೂಡಲೇ ಗಮನಹರಿಸಬೇಕು ಎಂದರು. ಇಲ್ಲವಾದಲ್ಲಿ ಆಸ್ಪತ್ರೆಯ ಎದುರು ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರ ಜೊತೆ ಸೇರಿ ಧರಣಿ ಕುಳಿತು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.