Police Sringeri ಕುದುರೆಗುಂಡಿ ಕೊಪ್ಪ ಚಿಕ್ಕಮಗಳೊರು ಜಯಪುರ ತೀರ್ಥಹಳ್ಳಿ ಬಾಳೆಹೊನ್ನೂರು ಹರಿಹರಪುರ

*ಠಾಣಾಧಿಕಾರಿ ಶ್ರೀ ಬಸವರಾಜ್ ಜಿ.ಕೆ.ಅವರಿಗೆ ಕೊಪ್ಪ ವ್ಯಾಪಾರಿಗಳಿಂದ ಬಿಳ್ಕೊಡುಗೆ*

*ಕೊಪ್ಪ ಪೋಲಿಸ್ ಠಾಣಾಧಿಕಾರಿಯಾಗಿ ಎರಡು ವರ್ಷ ಕರ್ತವ್ಯ ನಿರ್ವಹಿಸಿ ದ.ಕ.ಜಿಲ್ಲೆಗೆ ವರ್ಗಾವಣೆಗೊಂಡಿರುವ ಶ್ರೀ ಬಸವರಾಜ್ ಜಿ.ಕೆ. ಅವರನ್ನು ಕೊಪ್ಪ ಪಟ್ಟಣದ ವ್ಯಾಪಾರಿ ಒಕ್ಕೂಟದ ಪರವಾಗಿ ಹೃದಯ ಸ್ಪರ್ಶಿ ಬಿಳ್ಕೊಡುಗೆ ನೀಡಲಾಯಿತು*

avatar

  • January 25, 2026
  • 1 minute read
  • 4 Likes
  • 504 Views
*ಠಾಣಾಧಿಕಾರಿ ಶ್ರೀ ಬಸವರಾಜ್ ಜಿ.ಕೆ.ಅವರಿಗೆ ಕೊಪ್ಪ ವ್ಯಾಪಾರಿಗಳಿಂದ ಬಿಳ್ಕೊಡುಗೆ*
*ಠಾಣಾಧಿಕಾರಿ ಶ್ರೀ ಬಸವರಾಜ್ ಜಿ.ಕೆ.ಅವರಿಗೆ ಕೊಪ್ಪ ವ್ಯಾಪಾರಿಗಳಿಂದ ಬಿಳ್ಕೊಡುಗೆ*

*ಕೊಪ್ಪ ಪೋಲಿಸ್ ಠಾಣಾಧಿಕಾರಿಯಾಗಿ ಎರಡು ವರ್ಷ ಕರ್ತವ್ಯ ನಿರ್ವಹಿಸಿ ದ.ಕ.ಜಿಲ್ಲೆಗೆ ವರ್ಗಾವಣೆಗೊಂಡಿರುವ ಶ್ರೀ ಬಸವರಾಜ್ ಜಿ.ಕೆ. ಅವರನ್ನು ಕೊಪ್ಪ ಪಟ್ಟಣದ ವ್ಯಾಪಾರಿ ಒಕ್ಕೂಟದ ಪರವಾಗಿ ಹೃದಯ ಸ್ಪರ್ಶಿ ಬಿಳ್ಕೊಡುಗೆ ನೀಡಲಾಯಿತು*.

ಭಾನುವಾರ ಸಂಜೆ ಪೋಲಿಸ್ ಠಾಣೆಗೆ ತೆರಳಿದ ವ್ಯಾಪಾರಿ ಒಕ್ಕೂಟದ ಸದಸ್ಯರು ಪ್ರಾಮಾಣಿಕ ಮತ್ತು ನಿಸ್ವಾರ್ಥ ಸೇವೆ ಸಲ್ಲಿಸಿದ ಶ್ರೀ ಬಸವರಾಜ್ ಅವರಿಗೆ ಶಾಲು ಹೊದಿಸಿ ,ಅಡಿಕೆ ಹಾರ ಹಾಕಿ ನೆನಪಿನ ಸ್ಮರಣಿಕೆ ನೀಡಿ ಸನ್ಮಾನಿಸಿ ಧನ್ಯವಾದಗಳನ್ನು ತಿಳಿಸಿ ಹೃದಯ ಸ್ಪರ್ಶಿಯಾಗಿ ಬಿಳ್ಕೊಡುಗೆ ನೀಡಿದರು.

ಶ್ರೀ ಬಸವರಾಜ್ ಜಿ.ಕೆ.ಅವರು ಮಾತನಾಡಿ ಕೊಪ್ಪ ದ ಜನರ ಪ್ರೀತಿ ,ಸಹಕಾರ ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಒಬ್ಬ ಪೋಲಿಸ್ ಅಧಿಕಾರಿ ರಾಜಕೀಯ ರಹಿತವಾಗಿ ಕರ್ತವ್ಯ ನಿರ್ವಹಿಸಲು ಸಾರ್ವಜನಿಕರ ಸಹಕಾರ ಕೂಡ ಅಷ್ಟೇ ಮುಖ್ಯ ವಾಗುತ್ತದೆ. ಕೊಪ್ಪದ ಸಾರ್ವಜನಿಕರು ಬಹಳ ಉತ್ತಮವಾಗಿ ಸಹಕಾರ ನೀಡಿದ್ದರಿಂದ ನಾನು ಎರಡು ವರ್ಷಗಳ ಕಾಲ ಇಲ್ಲಿ ಕರ್ತವ್ಯ ನಿರ್ವಹಿಸಲು ಕಾರಣ ಎಂದರು. 

ವ್ಯಾಪಾರಿ ಒಕ್ಕೂಟದ ಪ್ರಕಾಶ್ ಸಿ.ಹೆಚ್. ಮಾತನಾಡಿ ಒಬ್ಬ ಪೋಲಿಸ್ ಅಧಿಕಾರಿ ತಮ್ಮ ವಿರುದ್ಧ ಮಾಧ್ಯಮದಲ್ಲಿ ಬರೆದರು ಅದನ್ನು ಧನಾತ್ಮಕವಾಗಿ ಸ್ವೀಕರಿಸಿ ಜನರ ಮನಸ್ಸಿನಲ್ಲಿ ಸದಾ ಉಳಿಯಲು ಕಾರಣವಾಗಿದ್ದರೆ, ಅದು ಬಸವರಾಜ್ ಸರ್ ಮಾತ್ರ ಎಂದರು. 

ನರೇಂದ್ರ ಕಾಮತ್ ಮಾತನಾಡಿ ನಿಮ್ಮ ಶಿಸ್ತು ಮತ್ತು ಪ್ರಾಮಾಣಿಕ ಕರ್ತವ್ಯ ಸದಾ ಮುಂದುವರೆಯಲಿ ಎಂದರೆ, ದಿವಾಕರ್ ಮಾತನಾಡಿ ಉನ್ನತ ಹುದ್ದೆಗೆ ಬಡ್ತಿ ಹೊಂದಿ ಯಶಸ್ವಿಯಾಗಿ ಎಂದು ಹಾರೈಸಿದರು. ಉದಯಕುಮಾರ್ ಜೈನ್ ‌ಮಾತನಾಡಿ ನೀವು ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚು ಕಟ್ಟಾಗಿ ನಡೆಸಲು ರಕ್ಷಣೆ ಕೊಡುವ ಜೊತೆಗೆ ಯಾವುದೇ ಗೊಂದಲ ಆಗದಂತೆ ಕರ್ತವ್ಯ ನಿರ್ವಹಿಸಿದ್ದು ಜನರ ಮನಸ್ಸಿನಲ್ಲಿ ಸದಾ ಉಳಿಯಲಿದೆ ಎಂದರು. ವ್ಯಾಪಾರಿ ಒಕ್ಕೂಟದ ಸುಬ್ರಹ್ಮಣ್ಯ, ವೆಂಕಟೇಶ್ ,ಅಜಿತ್ ಶೆಣೈ ಸೇರಿದಂತೆ ಮತ್ತಿತರರು ಬಿಳ್ಕೊಡುಗೆ ನೀಡುವ ಸಮಯದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

Gallery