ಚಿಕ್ಕಮಗಳೊರು Sringeri ಕುದುರೆಗುಂಡಿ ಕೊಪ್ಪ ಜಯಪುರ ಬಾಳೆಹೊನ್ನೂರು ಹರಿಹರಪುರ ತೀರ್ಥಹಳ್ಳಿ

ಕೊಪ್ಪ ಆಟೋ ಸಂಘದಿಂದ ಸಾರ್ವಜನಿಕ ಅಂಬ್ಯುಲೆನ್ಸ್ ಸೇವೆ.

ಕೊಪ್ಪ ಆಟೋ ಚಾಲಕರು ಮತ್ತು ಮಾಲಿಕರ ಸಂಘದಿಂದ ಸಾರ್ವಜನಿಕರಿಗೆ ಶ್ರೀ ಶಾರಾದಾಂಭ ಅಂಬ್ಯುಲೆನ್ಸ್ ಸೇವೆ*

avatar

  • July 22, 2026
  • 1 minute read
  • 2 Likes
  • 242 Views
ಕೊಪ್ಪ ಆಟೋ ಸಂಘದಿಂದ ಸಾರ್ವಜನಿಕ ಅಂಬ್ಯುಲೆನ್ಸ್ ಸೇವೆ.
ಕೊಪ್ಪ ಆಟೋ ಸಂಘದಿಂದ ಸಾರ್ವಜನಿಕ ಅಂಬ್ಯುಲೆನ್ಸ್ ಸೇವೆ.

*ಕೊಪ್ಪ ಆಟೋ ಚಾಲಕರು ಮತ್ತು ಮಾಲಿಕರ ಸಂಘದಿಂದ ಸಾರ್ವಜನಿಕರಿಗೆ ಅಂಬ್ಯುಲೆನ್ಸ್ ಸೇವೆ*

ಶೃಂಗೇರಿ ಶ್ರೀ ಜಗದ್ಗುರುಗಳ ಅಭಯ ಹಸ್ತದಿಂದ ಕೊಡುಗೆಯಾಗಿ ಅಂಬ್ಯುಲೆನ್ಸ್ ಒಂದನ್ನು ಕೊಪ್ಪ ಆಟೋ ಮಾಲಿಕರು  ಮತ್ತು ಚಾಲಕರ ಸಂಘಕ್ಕೆ ನೀಡಲಾಗಿದ್ದು, ಇದನ್ನು ಆಟೋ ಚಾಲಕರು ಮತ್ತು ಮಾಲಿಕರ ಸಂಘದ ಗೌರವಾಧ್ಯಕ್ಷರಾದ ಶ್ರೀ ಹೆಚ್.ಆರ್.ಜಗದೀಶ್ ಅವರು ಸಾರ್ವಜನಿಕರ ಸೇವೆಗೆ ಚಾಲನೆ ನೀಡಿದ್ದಾರೆ.ಹಲವಾರು ಸಾಮಾಜಿಕ ಕಾರ್ಯಕ್ರಮ ನೀಡುವ ಆಟೋ ಚಾಲಕರು ಮತ್ತು ಮಾಲಿಕರ ಸಂಘದ ಅಧ್ಯಕ್ಷರಾದ ಶ್ರೀ ಜಗದೀಶ್ ಅವರು ಶೃಂಗೇರಿ ಮಠದ ಮುಖಾಂತರ ಮಲೆನಾಡಿನ ಜನರಿಗೆ ಅನುಕೂಲವಾಗುವಂತೆ ಅಂಬ್ಯುಲೆನ್ಸ್ ಸೇವೆ ಪ್ರಾರಂಭಿಸಲು ಶ್ರಮವಹಿಸಿ ಅದನ್ನು ಯಶಸ್ವಿಯಾಗಿ ಸಾರ್ವಜನಿಕರ ಸೇವೆಗೆ ಮುಕ್ತ ಗೊಳಿಸಿದ್ದಾರೆ. ಇದರ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ. ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಅತೀ ಕಡಿಮೆ ದರದಲ್ಲಿ ಸೇವೆ ಒದಗಿಸಲಾಗುತ್ತದೆ ಮತ್ತು ದಿನದ 24 ಗಂಟೆಯೂ ಅಂಬ್ಯುಲೆನ್ಸ್ ವಾಹನ ಸೇವೆಗನುಗುಣವಾಗಿ ಲಭ್ಯವಿದೆ ಎಂದು ತಿಳಿಸಿದ್ದಾರೆ. ಸಾರ್ವಜನಿಕರಿಗೆ ಸದಾ ರಕ್ತ ದಾನ ,ಅಪಘಾತ ಸಂದರ್ಭದಲ್ಲಿ ತುರ್ತು ರವಾನೆ ಮುಂತಾದ ಸೇವೆ ನೀಡುವ ಆಟೋ ಚಾಲಕರು ತಮ್ಮ ಸಂಘದಿಂದ ಮತ್ತೊಂದು ಉತ್ತಮ ಅಂಬ್ಯುಲೆನ್ಸ್ ಸೇವೆ ನೀಡುತ್ತಿರುವುದು ಆಟೋ ಚಾಲಕರ ಮಾನವೀಯ ಹೃದಯವಂತಿಕೆಗೆ ಸಾಕ್ಷಿಯಾಗಿದೆ. ಸಾರ್ವಜನಿಕರು ಸಹ ಇವರ ಈ ನಿಸ್ವಾರ್ಥ ಸೇವೆ ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸಿದ್ದಾರೆ.