ಚಿಕ್ಕಮಗಳೊರು ಕೊಪ್ಪ ತೀರ್ಥಹಳ್ಳಿ ಜಯಪುರ ಕುದುರೆಗುಂಡಿ ಕಲೆ ಮತ್ತು ಸಂಸ್ಕೃತಿ Sringeri ಬಾಳೆಹೊನ್ನೂರು ಹರಿಹರಪುರ

*ಕೊಪ್ಪದಲ್ಲಿ ಆಯುರ್ವೇದ ವ್ಯಾಸಂಗ ಮಾಡಿದ ಡಾ ಸಂಜನಾ ಗೆ ಚಿನ್ನದ ಪದಕ *

*ಕೊಪ್ಪದಲ್ಲಿ ವೈದ್ಯಕೀಯ ವ್ಯಾಸಂಗ ಮಾಡಿದ ಡಾ ಸಂಜನಾ ಎಸ್. ರಾವ್ ಗೆ ಎರಡು ಚಿನ್ನದ ಪದಕ*

avatar

  • June 17, 2026
  • 1 minute read
  • 0 Likes
  • 690 Views
*ಕೊಪ್ಪದಲ್ಲಿ ಆಯುರ್ವೇದ ವ್ಯಾಸಂಗ ಮಾಡಿದ ಡಾ ಸಂಜನಾ ಗೆ  ಚಿನ್ನದ ಪದಕ *
*ಕೊಪ್ಪದಲ್ಲಿ ಆಯುರ್ವೇದ ವ್ಯಾಸಂಗ ಮಾಡಿದ ಡಾ ಸಂಜನಾ ಗೆ ಚಿನ್ನದ ಪದಕ *

*ಕೊಪ್ಪದಲ್ಲಿ ವೈದ್ಯಕೀಯ ವ್ಯಾಸಂಗ ಮಾಡಿದ ಡಾ ಸಂಜನಾ ಎಸ್. ರಾವ್ ಗೆ ಎರಡು ಚಿನ್ನದ ಪದಕ*
ಕೊಪ್ಪದ ಎ.ಎಲ್.ಎನ್.ರಾವ್. ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಬಿ.ಎ.ಎಮ್.ಎಸ್ ಪದವಿ ವ್ಯಾಸಂಗ ಮಾಡಿದ ವಿದ್ಯಾರ್ಥಿನಿ ಡಾ: ಸಂಜನಾ ಎಸ್.ರಾವ್ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಅಂತಿಮ ಪದವಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು,,ಮಂಗಳವಾರ ಬೆಂಗಳೂರಿನಲ್ಲಿ ನಡೆದ  ರಾಜೀವ್ ಗಾಂಧಿ ವಿಶ್ವ ವಿದ್ಯಾಲಯದ 28ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಡಾ ಸಂಜನಾ ಎಸ್ ರಾವ್ ಅವರಿಗೆ ಎರಡು ಚಿನ್ನದ ಪದಕ ಪ್ರಧಾನ ಮಾಡಿದರು. ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ನಗದು ಬಹುಮಾನ ಮತ್ತು ಪದವಿ ಪ್ರಮಾಣ ಪತ್ರ ನೀಡಿದರು.

 ಸಮಾರಂಭದಲ್ಲಿ ವೈಧ್ಯಕೀಯ ಶಿಕ್ಷಣ ಸಚಿವ ಡಾ ಶರಣ ಪ್ರಕಾಶ್ ಪಾಟೀಲ್ ,ವಿಶ್ವ ವಿದ್ಯಾಲಯದ ಕುಲಪತಿಗಳಾದ ಡಾ ಬಿ..ಸಿ.ಭಗವಾನ್ ಮತ್ತು ಆಯುರ್ವೇದ ವಿಭಾಗದ ಡೀನ್ ಆದ ಡಾ ಸಂಜಯ ಕೆ.ಎಸ್. ಅವರು ಉಪಸ್ಥಿತರಿದ್ದರು.

Gallery