ವಿದ್ಯುತ್ ಇಲಾಖೆ ಖಾಸಗೀಕರಣ ಮಾಡಿ ಟಾಟಾ ಪವರ್ ಸಂಸ್ಥೆಯ ಸುಪರ್ಧಿಗೆ ಕೊಡಲು ಹೊರಟಿರುವ ಸರ್ಕಾರದ ನಿರ್ಧಾರಕ್ಕೆ ಬಾರೀ ವಿರೋಧ ವ್ಯಕ್ತವಾಗಿದ್ದು, ಕೊಪ್ಪ ಮೆಸ್ಕಾಂನಲ್ಲಿ ಮಹತ್ವದ ಸಭೆ.

avatar

  • June 18, 2026
  • 1 minute read
  • 1 Like
  • 252 Views
ವಿದ್ಯುತ್ ಇಲಾಖೆ ಖಾಸಗೀಕರಣಕ್ಕೆ ವಿರೋಧ
ವಿದ್ಯುತ್ ಇಲಾಖೆ ಖಾಸಗೀಕರಣಕ್ಕೆ ವಿರೋಧ

ವಿದ್ಯುತ್ ಇಲಾಖೆ ಖಾಸಗೀಕರಣ ಮಾಡಿ ಟಾಟಾ ಪವರ್ ಸಂಸ್ಥೆಯ ಸುಪರ್ಧಿಗೆ ಕೊಡಲು ಹೊರಟಿರುವ ಸರ್ಕಾರದ ನಿರ್ಧಾರಕ್ಕೆ ಬಾರೀ ವಿರೋಧ ವ್ಯಕ್ತವಾಗಿದ್ದು, ಈ ಕುರಿತು ವಿವಿಧ ಸಂಘಟನೆಗಳೊಂದಿಗೆ ಕೊಪ್ಪ ಮೆಸ್ಕಾಂನಲ್ಲಿ ಬೆಂಬಲ ವ್ಯಕ್ತಪಡಿಸಲು ಮತ್ತು ಸಾರ್ವಜನಿಕರಿಗೆ ಖಾಸಗೀಕರಣ ಮಾಡಿದರೆ ಆಗುವ ತೊಂದರೆಗಳ ಬಗ್ಗೆ ವಿವರಿಸಲು ಮೆಸ್ಕಾಂನ ಅಸಿಸ್ಟೆಂಟ್ ಇಂಜಿನಿಯರ್ ಅವರು ಮೆಸ್ಕಾಂ ಕಛೇರಿಯಲ್ಲಿ ಸಭೆ ನಡೆಸಿದರು. ಇದರ ಬಗ್ಗೆ ಈಗಾಗಲೇ ಮೆಸ್ಕಾಂ ಇಲಾಖೆಯ ವತಿಯಿಂದ ಖಾಸಗೀಕರಣ ಮಾಡದಂತೆ ಹಾಗೂ ಇದರ ಪ್ರಸ್ತಾಪ ಕೈಬಿಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ತಹಶಿಲ್ದಾರರ ಮುಖಾಂತರ ಮನವಿ ಸಲ್ಲಿಸಲಾಗಿದೆ ಮತ್ತು ಕೆ.ಇ.ಆರ್.ಸಿ ಗೆ ಸಹ ಖಾಸಗೀಕರಣ ವಿರೋಧಿಸಿ ಪತ್ರ ಬರೆಯಲಾಗಿದೆ ಮತ್ತು ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ವಿರೋಧ ಪತ್ರಕ್ಕೆ ಸಹಿ ಹಾಕಿಸಿ ಅಭಿಯಾನ ಮಾಡಲಾಗುತ್ತಿದೆ. ಸರ್ಕಾರದ ಸುಪತ್ತಿಯಲ್ಲಿರುವ ವಿದ್ಯುತ್ ಇಲಾಖೆಯನ್ನು ಖಾಸಗಿ ಟಾಟಾ ಕಂಪನಿ ಒಡೆತನಕ್ಕೆ ಮಾರಾಟ ಮಾಡಿದರೆ .ಮಲೆನಾಡಿನ ರೈತರು, ವ್ಯಾಪಾರಸ್ಥರು ಈಗೀರುವ ದರಕ್ಕಿಂತ ದುಪ್ಪಟ್ಟು ದರ ಪಾವತಿಸಬೇಕಾಗುತ್ತದೆ ಮತ್ತು ಈಗಾಗಲೇ ಮಲೆನಾಡಿನ ಭಾಗದವರು ಮಳೆಗಾಲದಲ್ಲಿ ವಿದ್ಯುತ್ ಲೈನ್ ಸಮಸ್ಯೆ ಮುಂತಾದ ಸಮಸ್ಯೆ ಎದುರಿಸುತ್ತಿದ್ದು ಇದರ ದುರಸ್ತಿ ಮಾಡಲು ಖಾಸಗಿ ಕಂಪನಿಯು ಗ್ರಾಹಕರಿಂದ ಹಣ ಕೇಳುವ ಸ್ಥಿತಿ ನಿರ್ಮಾಣ ಆಗುತ್ತದೆ ಮತ್ತು ನಿರುದ್ಯೋಗ ಸಮಸ್ಯೆ ಸಹ ತಲೆದೋರುತ್ತದೆ ,ಆದ್ದರಿಂದ ಇದರಿಂದ ಮಲೆನಾಡಿನ ಗ್ರಾಹಕರು ಅತಿ ಹೆಚ್ಚು ಸಂಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಮೆಸ್ಕಾಂ ಅಧಿಕಾರಿಗಳು ಬೇರೆ ರಾಜ್ಯದ ಉದಾಹರಣೆ ನೀಡಿ ಸಭೆಯ ಗಮನಕ್ಕೆ ತಂದರು. ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಸಂಘಟನೆಯ ಮುಖಂಡರು ಈ ಖಾಸಗೀಕರಣಕ್ಕೆ ನಮ್ಮ ಸಂಪೂರ್ಣ ವಿರೋಧ ಇರುವುದಾಗಿ ತಿಳಿಸಿ, .ಹೋರಾಟಕ್ಬೆ ಬೇಕಾದ ಬೆಂಬಲ ನೀಡಲು ಸಹಕಾರ ನೀಡುವುದಾಗಿ ತಿಳಿಸಿದರು. ಸಭೆಯಲ್ಲಿ ತಾಲ್ಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಕೆಸಕುಡಿಗೆ ಕೃಷ್ಣ ಮೂರ್ತಿ, ಪಟ್ಟಣ ವ್ಯಾಪಾರಿ ಒಕ್ಕೂಟದ ಮುಖಂಡರಾದ ಪ್ರಕಾಶ್ ಸಿ.ಹೆಚ್. ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶ್ರೀ ಎ ದಿವಾಕರ್, ಪತ್ರಕರ್ತರಾದ ಉದಯಕುಮಾರ್ ಜೈನ್, ಫ್ರಾನ್ಸಿಸ್ ಕಾರ್ಡೋಜ, ನಾಗರಾಜ್ ದೇವಾಡಿಗ, ಅರುಣ್ , ಬಂಟರ ಸಂಘದ ಅಧ್ಯಕ್ಷ ಪ್ರಸನ್ನ ಶೆಟ್ಟಿ, ಸಂಜೀವಿನಿ ಒಕ್ಕೂಟದ ದಯಾಕರ್ ಮತ್ತು ಪಟ್ಟಣ ಪಂಚಾಯಿತಿಯ ರಾಮಪ್ಪ ಮತ್ತು ಮೆಸ್ಕಾಂ ಇಲಾಖೆಯ ರಜಾಕ್ ,ರವಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Gallery