ಕೊಪ್ಪ Sringeri ಕುದುರೆಗುಂಡಿ ಚಿಕ್ಕಮಗಳೊರು ಜಯಪುರ ತೀರ್ಥಹಳ್ಳಿ ಬಾಳೆಹೊನ್ನೂರು ಹರಿಹರಪುರ Police

*ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ*

ಮೇ 03 ಕ್ಕೆ ಕೊಪ್ಪದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ ನವಚೈತ್ರ ಆರೋಗ್ಯ ಕಾಳಜಿ ಶಿಬಿರ 208 ರ ಅಂಗವಾಗಿ ಲಯನ್ಸ್ ಸಹ್ಯಾದ್ರಿ ಕೊಪ್ಪ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) (ಬಿ.ಸಿ. ಟ್ರಸ್ಟ್), ಎನ್.ಆ‌ರ್.ಪುರ - ಕೊಪ್ಪ ಮಾಲೀಕರು ವಿಕಾಸ್ ಬೇಗನೆ ಯವರ ಬೇಗಾನೆ ಫಾರಂ, ಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಸಾದ್‌ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ಇವರಿಂದ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾಶಿಬಿರ ಹಾಗೂ ಜಸ್ಟೀಸ್ ಕೆ.ಎಸ್.ಹೆಗಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ, ಮಂಗಳೂರು ಇವರಿಂದ ಬೃಹತ್ ಉಚಿತ ಆರೋಗ್ಯ ಶಿಬಿರವು ಮೇ 03 ರಭಾನುವಾರ ಬೆಳಿಗ್ಗೆ ಘಂಟೆ 9-00 ರಿಂದ ಮಧ್ಯಾಹ್ನ 1-00 ವರೆಗೆ ಕೊಪ್ಪ ಮುಖ್ಯ ರಸ್ತೆಯ ಪಿಎಂಶ್ರೀ ಕೆ.ಪಿ.ಎಸ್. ಪಟ್ಟಣ ಶಾಲೆಯ ಸಭಾಂಗಣದಲ್ಲಿ ನಡಯಲಿದೆ

*ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ*
*ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ*

ಮೇ 03 ಕ್ಕೆ ಕೊಪ್ಪದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ 
ನವಚೈತ್ರ ಆರೋಗ್ಯ ಕಾಳಜಿ ಶಿಬಿರ 208 ರ ಅಂಗವಾಗಿ ಲಯನ್ಸ್ ಸಹ್ಯಾದ್ರಿ ಕೊಪ್ಪ,  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) (ಬಿ.ಸಿ. ಟ್ರಸ್ಟ್), ಎನ್.ಆ‌ರ್.ಪುರ - ಕೊಪ್ಪ   ಮಾಲೀಕರು ವಿಕಾಸ್ ಬೇಗನೆ ಯವರ  ಬೇಗಾನೆ ಫಾರಂ, ಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಸಾದ್‌ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ಇವರಿಂದ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾಶಿಬಿರ ಹಾಗೂ ಜಸ್ಟೀಸ್ ಕೆ.ಎಸ್.ಹೆಗಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ, ಮಂಗಳೂರು ಇವರಿಂದ  ಬೃಹತ್ ಉಚಿತ ಆರೋಗ್ಯ ಶಿಬಿರವು ಮೇ 03 ರಭಾನುವಾರ ಬೆಳಿಗ್ಗೆ ಘಂಟೆ 9-00 ರಿಂದ ಮಧ್ಯಾಹ್ನ 1-00 ವರೆಗೆ ಕೊಪ್ಪ ಮುಖ್ಯ ರಸ್ತೆಯ ಪಿಎಂಶ್ರೀ ಕೆ.ಪಿ.ಎಸ್. ಪಟ್ಟಣ ಶಾಲೆಯ ಸಭಾಂಗಣದಲ್ಲಿ ನಡಯಲಿದೆ. ಶಿಬಿರದಲ್ಲಿ ಅಗತ್ಯವಿದ್ದವರಿಗೆ ರಿಯಾಯಿತಿ ದರದಲ್ಲಿ ಕನ್ನಡಕಗಳು ಲಭ್ಯವಿದೆ. ಕಣ್ಣಿನ ಪೊರೆ ಚಿಕಿತ್ಸೆಗೆ ಒಳಪಡುವ ರೋಗಿಗಳನ್ನು ತಪಾಸಣಾ ದಿನದಂದೇ ಉಡುಪಿಯ ಪ್ರಸಾದ್ ಆಸ್ಪತ್ರೆಗೆ ಕರೆದೊಯ್ದು ಉಚಿತ ಶಸ್ತ್ರಚಿಕಿತ್ಸೆ ಮಾಡಿಸಿ ನಂತರ ಶಿಬಿರ ನಡೆದ ಸ್ಥಳಕ್ಕೆ ಉಚಿತವಾಗಿ ಕರೆತಂದು ಬಿಡಲಾಗುವುದು ಶಸ್ತ್ರಚಿಕಿತ್ಸೆಗೆ ಆಯ್ಕೆಯಾದ ಫಲಾನುಭವಿಗಳಿಗೆ ಉಚಿತ ಸಾರಿಗೆ ಮತ್ತು ವಸತಿ ಸೌಲಭ್ಯಗಳನ್ನು ನೀಡಲಾಗುವುದು. ಶಿಬಿರಕ್ಕೆ ಬರುವಾಗ ಆಧಾರ್ ಕಾರ್ಡ್ ಅಥವಾ ಭಾವಚಿತ್ರ ಇರುವ ಯಾವುದಾದರೊಂದು ಗುರುತಿನ ಚೀಟಿಯನ್ನು ತರತಕ್ಕದ್ದು.ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡವರು ವೈದ್ಯರು ಸೂಚಿಸಿದ ದಿನದಂದು ಶಿಬಿರ ನಡೆದ ಸ್ಥಳಕ್ಕೆ ಕಡ್ಡಾಯವಾಗಿ ಮರು ಪರೀಕ್ಷೆಗೆ ಬರತಕ್ಕದ್ದು. ತಪಾಸಣೆಗೆ ಬರುವಾಗ ಈ ಹಿಂದೆ ತಪಾಸಣೆಗೊಳಗಾಗಿದ್ದಲ್ಲಿ ವೈದ್ಯಕೀಯ ದಾಖಲೆಗಳಿದ್ದಲ್ಲಿ ತರತಕ್ಕದ್ದು. ದೇರಳಕಟ್ಟೆಯ ಕೆಎಸ್,ಹೆಗ್ಡೆ ಅಸ್ಪತ್ರೆಯವರಿಂದ ಶಿಬಿರದಲ್ಲಿ ಜನರಲ್ ಮೆಡಿಸಿನ್, ಶ್ವಾಸಕೋಶ ಸಂಬಂಧಿ ಕಾಯಿಲೆಗಳು, ಶಸ್ತ್ರಚಿಕಿತ್ಸೆ ವಿಭಾಗ, ಹೃದಯರೋಗ, ಕಿವಿ ಮೂಗು ಗಂಟಲು ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ಚರ್ಮರೋಗ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ಎಲುಬು ಮತ್ತು ಕೀಲು ಚಿಕಿತ್ಸೆ, ಬೆನ್ನುಮೂಳೆ ಚಿಕಿತ್ಸೆ, ಮೊಣಕಾಲಿನ ಚಿಕಿತ್ಸೆ, ಕ್ಯಾನ್ಸರ್ ಚಿಕಿತ್ಸೆ, ಅಪೆಂಡಿಕ್ಸ್, ಅಲ್ಸರ್, ಥೈರಾಯಿಡ್, ಹರ್ನಿಯಾ ಚಿಕಿತ್ಸೆ, ಗರ್ಭಕೋಶದ ಗಡ್ಡೆ, ಮೂಲವ್ಯಾಧಿ, ಸಂಧಿವಾತ, ಉದರ ಸಂಬಂಧಿ ಕಾಯಿಲೆ, ವರಿಕೋಸ್ ವೇನ್, ನರ ಸಂಬಂಧಿ ಚಿಕಿತ್ಸೆಗಳ ತಪಾಸಣೆ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ  ಈ ಕೇಳಗಿನ ನಂಬರುಗಳನ್ನು   ಸಂಪರ್ಕಿಸುವಂತೆ ಆಯೋಜಕರು ತಿಳಿಸಿದ್ದಾರೆ  ಲ,ಪ್ರಭಾಪ್ರಕಾಶ್, ಅಧ್ಯಕ್ಷರು ಲಯನ್ಸ್, ಸಹ್ಯಾದ್ರಿ, ಕೊಪ್ಪ - 9482544657 ಲ,ಸುಮಾರಂಗಪ್ಪ, ಕಾರ್ಯದರ್ಶಿ - 9449246155, ಲ,ಕೆ.ಎಸ್. ಶಾಂತ, ಖಜಾಂಚಿ - 8277135752 ರಾಜೇಶ್, ಯೋಜನಾಧಿಕಾರಿಗಳು, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ - 9449925185, ರವಿಕುಮಾರ್, ಮೇಲ್ವಿಚಾರಕರು ಎಸ್.ಕೆ.ಡಿ.ಜಿ.ವೈ ಕೊಪ್ಪ. 9008136005, ನವಚೈತ್ರ ಸಾಂಸ್ಕೃತಿಕ ವೇದಿಕೆ ಕೊಪ್ಪ- 7795144239, ಡಾ. ಅನಿತಾ ಎನ್.ರಾವ್-9113547909, ಲ,ಎಂ.ಟಿ. ಶಂಕರಪ್ಪ- 9980121453

Gallery