ಕೊಪ್ಪ Sringeri ಕಲೆ ಮತ್ತು ಸಂಸ್ಕೃತಿ ಚಿಕ್ಕಮಗಳೊರು Police ಕುದುರೆಗುಂಡಿ ಜಯಪುರ ತೀರ್ಥಹಳ್ಳಿ ಬಾಳೆಹೊನ್ನೂರು ಹರಿಹರಪುರ

ಎಸ್‌. ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶದಲ್ಲಿ ಕೊಪ್ಪ ಕೆ.ಪಿ.ಎಸ್. ಶೇ 99 ಸಾಧನೆ

ಕೊಪ್ಪ ಕೆ.ಪಿ.ಎಸ್.ಪ್ರೌಢಶಾಲೆಗೆ ಶೇ 99 ಫಲಿತಾಂಶ:- ಕೊಪ್ಪದ ಸರ್ಕಾರಿ ಪ್ರೌಢಶಾಲೆ ವಿಭಾಗದಲ್ಲಿ ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಅತ್ಯುತ್ತಮವಾಗಿ ಬಂದಿದ್ದು,ಕೆ.ಪಿ.ಎಸ್ ಶಾಲೆಯ ವಿದ್ಯಾರ್ಥಿ ಸರವಣ್ ಗೌಡ ಶೇ 98.72 ಪ್ರಥಮ ಸ್ಥಾನ , ಅನನ್ಯ .ಜಿ. ಶೇ 97.76 ದ್ವಿತೀಯ ಸ್ಥಾನ ಹಾಗೂ ಧೀರಜ್ ಸಿ.ಪಿ. ಶೇ 96 ಮತ್ತು ಆದ್ಯಾ ಶೇ 96 ತೃತೀಯ ಸ್ಥಾನ ದ ಫಲಿತಾಂಶದೊಂದಿಗೆ ಉತ್ತೀರ್ಣರಾಗಿ ಸರ್ಕಾರಿ ಶಾಲೆಗೆ ಕೀರ್ತಿ ತಂದಿರುತ್ತಾರೆ.

avatar

  • April 24, 2026
  • 1 minute read
  • 2 Likes
  • 171 Views
ಎಸ್‌. ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶದಲ್ಲಿ ಕೊಪ್ಪ ಕೆ.ಪಿ.ಎಸ್. ಶೇ 99 ಸಾಧನೆ
ಎಸ್‌. ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶದಲ್ಲಿ ಕೊಪ್ಪ ಕೆ.ಪಿ.ಎಸ್. ಶೇ 99 ಸಾಧನೆ

ಕೊಪ್ಪ ಕೆ.ಪಿ.ಎಸ್.ಪ್ರೌಢಶಾಲೆಗೆ ಶೇ 99 ಫಲಿತಾಂಶ:-
ಕೊಪ್ಪದ ಸರ್ಕಾರಿ ಪ್ರೌಢಶಾಲೆ ವಿಭಾಗದಲ್ಲಿ ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಅತ್ಯುತ್ತಮವಾಗಿ ಬಂದಿದ್ದು,ಕೆ.ಪಿ.ಎಸ್ ಶಾಲೆಯ ವಿದ್ಯಾರ್ಥಿ ಸರವಣ್ ಗೌಡ ಶೇ 98.72 ಪ್ರಥಮ ಸ್ಥಾನ , ಅನನ್ಯ .ಜಿ. ಶೇ 97.76 ದ್ವಿತೀಯ ಸ್ಥಾನ ಹಾಗೂ ಧೀರಜ್  ಸಿ.ಪಿ. ಶೇ 96  ಮತ್ತು ಆದ್ಯಾ ಶೇ 96 ತೃತೀಯ ಸ್ಥಾನ ದ ಫಲಿತಾಂಶದೊಂದಿಗೆ ಉತ್ತೀರ್ಣರಾಗಿ ಸರ್ಕಾರಿ ಶಾಲೆಗೆ ಕೀರ್ತಿ ತಂದಿರುತ್ತಾರೆ. ಇವರಿಗೆ ಶಾಲೆಯ ಉಪ- ಪ್ರಾಂಶುಪಾಲರಾದ ಶ್ರೀ ರಾಘವೇಂದ್ರ ಎನ್. ಜಿ. ಮತ್ತು ಶಾಲೆಯ ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ಶ್ರೀ ಶಿವಾನಂದ್ ಮತ್ತು ಎಸ್.ಡಿ.ಎಮ್.ಸಿ.ಸದಸ್ಯರು ,ಹಾಗೂ ಶಾಲೆಯ ಎಲ್ಲಾ ಶಿಕ್ಷಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಒಟ್ಟಾರೆ ಫಲಿತಾಂಶ ಸಹ ಈ ಬಾರಿ ಅತ್ಯುತ್ತಮವಾಗಿ ಬಂದಿದ್ದು,91 ವಿದ್ಯಾರ್ಥಿಗಳ ಪೈಕಿ 19 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 51 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 14 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಮತ್ತು 6 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿ. ಶಾಲೆಗೆ ಉತ್ತಮ ಫಲಿತಾಂಶ ತಂದು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.ಹತ್ತು ವಿದ್ಯಾರ್ಥಿಗಳು ಪ್ರಥಮ ಭಾಷೆಯಲ್ಲಿ ಶೇ 100 ಅಂಕ ಪಡೆದಿದ್ದರೆ, 7 ವಿದ್ಯಾರ್ಥಿಗಳು ತೃತೀಯ ಭಾಷಾ ವಿಷಯದಲ್ಲಿ 100 ಅಂಕಗಳಿಗೆ 100 ಅಂಕ ಪಡೆದು ಶಾಲೆಯ ಕೀರ್ತಿ ಇನ್ನಷ್ಟು ಹೆಚ್ಚಿಸಿದ್ದಾರೆ. ಉಪ ಪ್ರಾಂಶುಪಾಲರು, ಎಸ್.ಡಿ‌.ಎಮ್.ಸಿ. ಅಧ್ಯಕ್ಷರು ಮತ್ತು ಸದಸ್ಯರು ,ಹಾಗೂ ಶಾಲಾ ಶಿಕ್ಷಕರ ಪ್ರೋತ್ಸಾಹದಿಂದ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದು, ಖಾಸಗಿ ಶಾಲೆಗಳ ಪೈಪೋಟಿ ನಡುವೆ ಸರ್ಕಾರಿ ಶಾಲೆಯ ಫಲಿತಾಂಶ ಎಲ್ಲರ ಹುಬ್ಬೇರುವಂತೆ ಮಾಡಿದೆ. ಈ ಫಲಿತಾಂಶಕ್ಕೆ ಎಲ್ಲರೂ ಅಭಿನಂದನಾರ್ಹರು ಎಂದು ಎಸ್.ಡಿ.ಎಮ್.ಸಿ.ಅಧ್ಯಕ್ಷ ಶ್ರೀ ಶಿವಾನಂದ್ ಮತ್ತು ಸದಸ್ಯರಾದ ಶ್ರೀ ಪ್ರಕಾಶ್ ಸಿ.ಹೆಚ್.ಅವರು ಸಂತಸ ವ್ಯಕ್ತಪಡಿಸಿದ್ದಾರೆ.