ಕಲೆ ಮತ್ತು ಸಂಸ್ಕೃತಿ ಕೊಪ್ಪ

ಕೋಪದ ಶ್ರೀ ವೀರಭದ್ರ ಸ್ವಾಮಿ ಮಹಾರಥೋತ್ಸವ ಸಂಪನ್ನ

ಶ್ರೀ ವೀರಭದ್ರ ಸ್ವಾಮಿ ರಥೋತ್ಸವದಲ್ಲಿ ಮಾಜಿ ಸಚಿವ ಡಿ.ಎನ್.ಜೀವರಾಜ್ ಭಾಗಿ.

avatar

  • April 12, 2025
  • 1 minute read
  • 7 Likes
  • 509 Views
ಕೋಪದ ಶ್ರೀ ವೀರಭದ್ರ ಸ್ವಾಮಿ ಮಹಾರಥೋತ್ಸವ ಸಂಪನ್ನ
ಕೋಪದ ಶ್ರೀ ವೀರಭದ್ರ ಸ್ವಾಮಿ ಮಹಾರಥೋತ್ಸವ ಸಂಪನ್ನ

ಕೊಪ್ಪದ ಆದಿ ದೇವ ಕೋಪದ ಶ್ರೀ ‌ವೀರಭದ್ರ ಸ್ವಾಮಿ ಮಹಾರಥೋತ್ಸವ ದಿನಾಂಕ 12 ಶನಿವಾರ ಮಧ್ಯಾಹ್ನ 1:30 ಕ್ಕೆ ಸಂಪನ್ನಗೊಂಡಿತು. ಬೆಳಿಗ್ಗೆ ರಥೋತ್ಸವದ ಪ್ರಯುಕ್ತ ಶ್ರೀ ಸ್ವಾಮಿಯ ಮೂರ್ತಿಯೊಂದಿಗೆ ಕೆಂಡದಾರ್ಚನೆ ನಡೆಸಲಾಯಿತು. ನಂತರ ಅಪಾರ ಭಕ್ತರು ಕೆಂಡ ಹಾರಿ ಸೇವೆ ಸಲ್ಲಿಸಿದರು. ನಂತರ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಹಿರೀಕೆರೆಗೆ ಕೊಂಡೊಯ್ದು ,ಪೂಜೆ ನೆರವೇರಿಸಿ, ರಥದೋಳಗೆ ಆರೋಹಣ ಮಾಡಲಾಯಿತು. ಈಡುಗಾಯಿ ನಂತರ ರಥದಲ್ಲಿ ವಿರಾಜಮಾನರಾಗಿ ಕುಳಿತ ಶ್ರೀ ವೀರಭದ್ರಸ್ವಾಮಿಗೆ ಮಂಗಳಾರತಿ ನೆರವೇರಿದ ನಂತರ, , ಅಪಾರ ಭಕ್ತರು ಶ್ರೀ.ವೀರಭದ್ರ ಸ್ವಾಮಿ ಗೆ ಜೈಕಾರ ಹಾಕುತ್ತಾ ಭಕ್ತಿ ಪರವಶದಿಂದ ಶ್ರೀವೀರಭದ್ರ ಸ್ವಾಮಿ ಯ ರಥವನ್ನು ಗಣಪತಿ ದೇವಸ್ಥಾನದ ವರೆಗೆ ಎಳೆದರು. ಚಂಡೆ ಕುಣಿತಕ್ಕೆ ಯುವ ಭಕ್ತರು ಕುಣಿದು ಕುಪ್ಪಳಿಸಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರಿಗೆ ಉಚಿತವಾಗಿ ಮಜ್ಜಿಗೆ ಪಾನಕದ ವ್ಯವಸ್ಥೆ ಶ್ರೀ ಸಾಯಿ ಗಾರ್ಮೆಂಟ್ಸ್ ವತಿಯಿಂದ ಮಾಡಲಾಗಿತ್ತು. ಮಹಾರಥೋತ್ಸವದಲ್ಲಿ ಕೊಪ್ಪ ಸುತ್ತಮುತ್ತಲಿನ ಸಾರ್ವಜನಿಕರು ಸೇರಿದಂತೆ ಮಾಜಿ ಸಚಿವರಾದ ಶ್ರೀ ಡಿ.ಎನ್.ಜೀವರಾಜ್ ಸಹ ಉಪಸ್ಥಿತರಿದ್ದರು. ಜಾತ್ರೆಯ ಸಿನಿಮಾ ದೃಶ್ಯ ಸೆರೆ ಹಿಡಿಯಲು ಬಂದಿದ್ದ ಸಿನಿಮಾ ತಂಡದ ಶ್ರೀ ಮಾಸ್ಟರ್ ಆನಂದ್ ಅವರು ರಥೋತ್ಸವದ ಕೇಂದ್ರ ಬಿಂದುವಾಗಿದ್ದರು. ಒಟ್ಟಾರೆ ಕೋಪದ ಶ್ರೀ ವೀರಭದ್ರ ಸ್ವಾಮಿ ರಥೋತ್ಸವ ಅದ್ದೂರಿಯಾಗಿ ಸಂಪನ್ನಗೊಂಡಿತು. ನಂತರ ಭೋಜನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

Gallery