ಮಾದಕ ವ್ಯಸನದಿಂದ ದೂರ ಇರಲು ಕೊಪ್ಪ ಪೋಲಿಸ್ ಠಾಣಾಧಿಕಾರಿ ಶ್ರೀ ಬಸವರಾಜ್ ಕರೆ.

avatar

  • September 15, 2025
  • 1 minute read
  • 1 Like
  • 285 Views
ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗಬೇಡಿ.
ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗಬೇಡಿ.

ಕೊಪ್ಪದ ಬಾಳಗಡಿಯ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಕೊಪ್ಪ ಪೋಲಿಸ್ ಠಾಣಾಧಿಕಾರಿ ಶ್ರೀ ಬಸವರಾಜ್ ಅವರು ಮಾಹಿತಿ ನೀಡಿದರು. ಇದರ ಬಗ್ಗೆ ಮಕ್ಕಳಿಗೆ ಜಾಗೃತೆ ವಹಿಸುವಂತೆ ಕರೆ ನೀಡಿದ ಅವರು ವಿದ್ಯಾರ್ಥಿಗಳು ಓದುವ ವಯಸ್ಸಿನಲ್ಲಿ ಇಂತಹ ದುಷ್ಚಟಗಳಿಗೆ ಬಲಿಯಾಗದೆ ಉತ್ತಮವಾಗಿ ವ್ಯಾಸಂಗ ಮಾಡಿ ಒಳ್ಳೆಯ ಅಂಕ ಪಡೆದು ಉತ್ತೀರ್ಣರಾಗಿ ತೆರಳಲು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಕೊಪ್ಪ ಪೋಲಿಸ್ ಠಾಣೆಯ ಶ್ರೀ ಮಥಾಯಿ ಮತ್ತು ಇನ್ನಿತರ ಸಿಬ್ಬಂದಿಗಳು ಹಾಗೂ ವಸತಿ ನಿಲಯದ ವಾರ್ಡನ್ ಗಳು ಮತ್ತು ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Gallery