ಚಿಕ್ಕಮಗಳೊರು ಕೊಪ್ಪ ಜಯಪುರ Sringeri ಕುದುರೆಗುಂಡಿ ತೀರ್ಥಹಳ್ಳಿ ಹರಿಹರಪುರ ಬಾಳೆಹೊನ್ನೂರು

ಕೊಪ್ಪ ಕೆ.ಪಿ.ಎಸ್.ಶಾಲೆಗೆ ದಾನಿ ವಿಶ್ವನಾಥ್ ಗದ್ಡೇಮನೆ ಅವರಿಂದ ಕೊಡುಗೆ. ಗೆ

ದಾನಿ ವಿಶ್ವನಾಥ್ ಗದ್ದೇಮನೆ ಅವರಿಂದ ಕೊಪ್ಪ ಕೆ.ಪಿ.ಎಸ್ .ಪ್ರಾಥಮಿಕ ಶಾಲಾ ಮಕ್ಕಳಿಗೆ ಕೊಡುಗೆ.

avatar

  • September 9, 2025
  • 1 minute read
  • 2 Likes
  • 345 Views
ಕೊಪ್ಪ ಕೆ.ಪಿ.ಎಸ್.ಶಾಲೆಗೆ ದಾನಿ ವಿಶ್ವನಾಥ್ ಗದ್ಡೇಮನೆ ಅವರಿಂದ ಕೊಡುಗೆ.         ಗೆ
ಕೊಪ್ಪ ಕೆ.ಪಿ.ಎಸ್.ಶಾಲೆಗೆ ದಾನಿ ವಿಶ್ವನಾಥ್ ಗದ್ಡೇಮನೆ ಅವರಿಂದ ಕೊಡುಗೆ. ಗೆ

ಕೊಪ್ಪ ಪಟ್ಟಣದ ಕೆ.ಪಿ.ಎಸ್.ಪ್ರಾಥಮಿಕ ಶಾಲೆಗೆ ಗದ್ದೇಮನೆ ವಿಶ್ವನಾಥ್ ಅವರಿಂದ ಕೊಡುಗೆ:-
ನರಸಿಂಹರಾಜಪುರ ತಾಲ್ಲೂಕಿನ ಗದ್ದೇಮನೆ ಶ್ರೀ ವಿಶ್ವನಾಥ್ ಅವರು ಕೊಪ್ಪ ಪಟ್ಟಣದ ಕೆ.ಪಿ.ಎಸ್.ಪ್ರಾಥಮಿಕ ಶಾಲೆಯ ಸುಮಾರು 350 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರ, ಟ್ರ್ಯಾಕ್ ಸೂಟ್ ಮತ್ತು ಶಾಲಾ ಬ್ಯಾಗ್ ಗಳನ್ನು ಉಚಿತವಾಗಿ ನೀಡಿದ್ದಾರೆ. ಶೃಂಗೇರಿ ಕ್ಷೇತ್ರದ ಎಲ್ಲಾ  ಸರ್ಕಾರಿ ಶಾಲೆಯ ಮಕ್ಕಳಿಗೆ ಇವರು ಉಚಿತವಾಗಿ ಸಮವಸ್ತ್ರ ಮತ್ತು ಬ್ಯಾಗ್ ಗಳನ್ನು ನೀಡುತ್ತಿದ್ದು. ಸೋಮವಾರ ಕೆ.ಪಿ.ಎಸ್. ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸದ್ದ ಕಾರ್ಯಕ್ರಮದಲ್ಲಿ ಇವರ ಬಳಗದ ಸದಸ್ಯರು ಮತ್ತು ಹಿರೇಕೊಡಿಗೆ ಶಾಲೆ ನಿವೃತ್ತ ಶಿಕ್ಷಕರಾದ ಶ್ರೀ ವಿದ್ಯಾನಂದ ಮತ್ತು ಜಿನೇಶ್ ಇರ್ವತ್ತೂರು ಇವರು ಶಾಲಾ ಮಕ್ಕಳಿಗೆ ಸಾಂಕೇತಿಕವಾಗಿ ಬ್ಯಾಗ್ ಮತ್ತು ಸಮವಸ್ತ್ರ ವಿತರಿಸಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೆ.ಪಿ.ಎಸ್.ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀ ಪ್ರಕಾಶ್ ಸಿ.ಹೆಚ್. ವಿಶ್ವನಾಥ್ ಗದ್ದೇಮನೆ ಅವರು ಸರ್ಕಾರಿ ಶಾಲೆಯಲ್ಲಿ ಕಲಿತು ವಕೀಲರಾಗಿ,ಉದ್ಯಮಿಯಾಗಿ ನಿಸ್ವಾರ್ಥ ಮನೋಭಾವದಿಂದ ನಮ್ಮ ಶಾಲೆಗೆ ಈ ಕೊಡುಗೆ ನೀಡಿದ್ದು ,ಇವರು ಸುಮಾರು 850 ಕ್ಕೂ ಅಧಿಕ ಶಾಲೆಗಳಿಗೆ ಸುಮಾರು ಒಂದೂವರೆ ಕೋಟಿ ವೆಚ್ಚದಲ್ಲಿ ಈ ಕಾರ್ಯ ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಂಡು ಅವರ ಹಾಗೆ ವಿದ್ಯಾವಂತರಾಗಿ ದಾನ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಗದ್ದೇಮನೆ ವಿಶ್ವನಾಥ್ ಅವರ ಪ್ರತಿನಿಧಿಯಾಗಿ ಭಾಗವಹಿಸಿದ ನಿವೃತ್ತ ಶಿಕ್ಷಕರಾದ ಶ್ರೀ ವಿದ್ಯಾನಂದ್ ಅವರು ಮಾತನಾಡಿ ವಿದ್ಯಾರ್ಥಿಗಳು ಸಂಸ್ಕಾರ, ಸಂಸ್ಕೃತಿ ಬೆಳೆಸಿಕೊಂಡರೆ ಸಂಪಾದನೆ ಅರಸಿಕೊಂಡು ಬರುತ್ತದೆ ಇದೇ ವಿಶ್ವನಾಥ್ ಅವರ ಸಾಧನೆಗೆ ಪೂರಕವಾಗಿದ್ದು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಮ್.ಸಿ ಸದಸ್ಯರಾದ ಶ್ರೀ ಶಿವಾನಂದ್ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಶ್ರೀ ಮತಿ ಜೀನತ್, ಸದಸ್ಯರಾದ ಸುಷ್ಮಾ,ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀ ನಾಗರಾಜ್ ಪವಾರ್ ,ಮುಖ್ಯೋಪಾಧ್ಯಾಯರಾದ ಶ್ರೀ ರುದ್ರೇಶ್, ಶಾಲೆಯ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.