ಕಲೆ ಮತ್ತು ಸಂಸ್ಕೃತಿ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾಗಿ ಉದ್ಯಮಿ . ರಘುನಾಥ್ ಆಯ್ಕೆ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ಎಕೆಬಿಎಂಎಸ್) ಅಧ್ಯಕ್ಷ ಸ್ಥಾನಕ್ಕಾಗಿ ಭಾನುವಾರ ನಡೆದಿದ್ದ ಚುನಾವಣೆಯಲ್ಲಿ ಎಸ್.ರಘುನಾಥ್ ಗೆಲುವು ಸಾಧಿಸಿದ್ದು, ತಮ್ಮ ಪ್ರತಿಸ್ಪರ್ಧಿ ಭಾನುಪ್ರಕಾಶ್ ಅವರನ್ನು ಸೋಲಿಸಿದರು.

avatar

  • April 14, 2025
  • 1 minute read
  • 14 Likes
  • 472 Views
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾಗಿ ಉದ್ಯಮಿ . ರಘುನಾಥ್ ಆಯ್ಕೆ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾಗಿ ಉದ್ಯಮಿ . ರಘುನಾಥ್ ಆಯ್ಕೆ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ಎಕೆಬಿಎಂಎಸ್) ಅಧ್ಯಕ್ಷ ಸ್ಥಾನಕ್ಕಾಗಿ ಭಾನುವಾರ ನಡೆದಿದ್ದ ಚುನಾವಣೆಯಲ್ಲಿ ಉದ್ಯಮಿ .ರಘುನಾಥ್ ಗೆಲುವು ಸಾಧಿಸಿದ್ದು, ತಮ್ಮ ಪ್ರತಿಸ್ಪರ್ಧಿ ವೈಧಿಕ ಪುರೋಹಿತರಾದ ಡಾ:ಭಾನುಪ್ರಕಾಶ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ.
ಎಸ್ ರಘುನಾಥ್ 13399 ಮತಗಳನ್ನು ಪಡೆದು ಅಭೂತಪೂರ್ವ ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿಯಾಗಿದ್ದ ಭಾನುಪ್ರಕಾಶ್ ಶರ್ಮ ಅವರು 11235 ಮತ ಪಡೆದು, 2164 ಮತಗಳ ಅಂತರದಲ್ಲಿ ಸೋಲಿನ ಹಾದಿ ಹಿಡಿದರು. 
ಫಲಿತಾಂಶ ಹೊರಬಿದ್ದ ನಂತರ ಮಾತನಾಡಿದ ಎಸ್. ರಘುನಾಥ್, ರಾಜ್ಯದಲ್ಲಿ 45ಲಕ್ಷ ಬ್ರಾಹ್ಮಣರಿದ್ದು, ಆರ್ಥಿಕವಾಗಿ ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪೌರೋಹಿತ್ಯ, ಅಡುಗೆ ಕೆಲಸ, ಅರ್ಚಕ ವೃತ್ತಿ ಮಾಡುವವರೇ ಹೆಚ್ಚಾಗಿದ್ದು, ಅಂತಹವರ ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ಸಿಗಬೇಕು.

ವೃತ್ತಿ ಭಾಂದವರು ಆರ್ಥಿಕವಾಗಿ ಸದೃಢರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಈ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ರೂಪಿಸಲಾಗುವುದು. ಒಟ್ಟಾರೆ ವಿಪ್ರ ಸಮುದಾಯದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಹೇಳಿದರು. ರಾಜ್ಯಾದ್ಯಂತ ಭಾನುವಾರ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಮತದಾನ ನಡೆದಿತ್ತು.