ಸಿ.ಇ.ಟಿ.ಪರೀಕ್ಷಾ ಸಮಯದಲ್ಲಿ ತಪಾಸಣೆ ನೆಪದಲ್ಲಿ ಬ್ರಾಹ್ಮಣರ ಪವಿತ್ರದ ಸಂಕೇತವಾದ ಯಜ್ಞೋಪವೀತ ಅಂದರೆ ಜನಿವಾರ ತೆಗೆಸಿ ಇಡೀ ಬ್ರಾಹ್ಮಣ ಸಮುದಾಯದವರಿಗೆ ಅಪಮಾನ ಮಾಡಿದವರಿಗೆ ಕೆಲಸದಿಂದ ವಜಾಗೊಳಿಸಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶನಿವಾರ ದಿನಾಂಕ 19-4-2025 ರಂದು ಕೊಪ್ಪ ತಾಲ್ಲೂಕು ಬ್ರಾಹ್ಮಣ ಮಹಾಸಭಾ ,ಕೊಪ್ಪ ತಾಲ್ಲೂಕು ವಿಪ್ರನೌಕರರ ಸಂಘ ಮತ್ತು ವಿಪ್ರ ಮಹಿಳಾ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ಕೊಪ್ಪ ತಹಶಿಲ್ದಾರರ ಕಚೇರಿ ಎದುರು ಸೇರಿ ತಹಶಿಲ್ದಾರರ ಮುಖಾಂತರ ಕರ್ನಾಟಕ ಸರ್ಕಾರದ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಬ್ರಾಹ್ಮಣ ಸಮುದಾಯದವರು ಮತ್ತು ಪುರೋಹಿತ ವರ್ಗದವರು ಜನಿವಾರ ತೆಗೆಸಿದವರ ವಿರುದ್ಧ ಆಕ್ರೋಶ ಹೊರಹಾಕಿದರು. ಬ್ರಾಹ್ಮಣರ ಮೇಲೆ ಹಿಂದಿನಿಂದಲೂ ಒಂದಲ್ಲ ಒಂದು ಕಿರುಕುಳ ನೀಡುತ್ತಾ ಬಂದಿರುವದಲ್ಲದೆ ,ಬ್ರಾಹ್ಮಣರು ಶಾಂತಿ ಪ್ರಿಯರು ಎಂದು ಅವರ ಮೇಲೆ ಇಂತಹ ದೌರ್ಜನ್ಯ ಮಾಡಿದರೆ ಬ್ರಾಹ್ಮಣ ಸಮುದಾಯ ಸಹಿಸುವುದಿಲ್ಲ ಮತ್ತು ಬ್ರಾಹ್ಮಣರು ಎಲ್ಲಾ ಧರ್ಮವನ್ನು ಗೌರವಿಸುತ್ತಾರೆ, ಎಲ್ಲರೊಂದಿಗೆ ಸೌಹಾರ್ದಮಯ ಜೀವನ ನಡೆಸುತ್ತಾರೆ ಇದು ಬರೀ ಬ್ರಾಹ್ಮಣ ಸಮುದಾಯಕ್ಕೆ ಆದ ಅವಮಾನವಲ್ಲ ಇಡೀ ಹಿಂದೂ ಸಮಾಜಕ್ಕೆ ಆದ ಅವಮಾನ ಎಂದು ತಾಲ್ಲೂಕು ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷರಾದ ಶ್ರೀ ಕೆಸಕುಡಿಗೆ ಕೃಷ್ಣ ಮೂರ್ತಿಯವರು ಹೇಳಿದರು. ಇನ್ನು ಮುಂದೆ ಇಂತಹ ಕೃತ್ಯಗಳು ನಡೆಯದಂತೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ನೀಡಬೇಕು ಮತ್ತು ಬ್ರಾಹ್ಮಣರ ವಿರುದ್ಧ ವಿನಾಕಾರಣ ನಿಂದನೆ ಹಾಗೂ ಕಿರುಕುಳ ನೀಡಿದರೆ ಬ್ರಾಹ್ಮಣ ಸಮುದಾಯದ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೆಬ್ಬಾರ್ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ವಿಜಯರಂಗ ಕೋಟೆತೋಟ ಅವರು ಹೇಳಿದರು. ಪ್ರತಿಭಟನಾ ಸಭೆಯಲ್ಲಿ ಬ್ರಾಹ್ಮಣ ಸಮುದಾಯದ ಮುಖಂಡರು, ಪದಾಧಿಕಾರಿಗಳು, ಹಾಗೂ ಸಮುದಾಯದ ಎಲ್ಲಾ ಹಿರಿಯರು ಮತ್ತು ಬ್ರಾಹ್ಮಣ ಸಮುದಾಯದ ಮಹಿಳೆಯರು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
ಕೊಪ್ಪ
"ಜನಿವಾರ ತೆಗೆಸಿದವರನ್ನು ವಜಾಮಾಡಿ" ಕೊಪ್ಪ ಬ್ರಾಹ್ಮಣ ಮಹಾಸಭಾ ಆಗ್ರಹ
ಜನಿವಾರ ತೆಗೆಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಕೊಪ್ಪ ತಾಲ್ಲೂಕು ಬ್ರಾಹ್ಮಣ ಮಹಾ ಸಭಾ ಆಗ್ರಹ
Share this article
ಈ ವಿಭಾಗದ ಸುದ್ದಿಗಳು
" ರಾಷ್ಟ್ರೀಯ ಏಕತಾ ದಿನದ ಆಚರಣೆ ಅಂಗವಾಗಿ ಮ್ಯಾರಥಾನ್ "
2 weeks ago
"ಕೊಪ್ಪ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಕ್ಕೆ ಬ್ರೇಕ್"
4 weeks ago
ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗಬೇಡಿ.
1 month ago