ಕೊಪ್ಪ ಚಿಕ್ಕಮಗಳೊರು

ವಿಶ್ವ ರಕ್ತದಾನ ದಿನಾಚರಣೆ ಅಂಗವಾಗಿ ದಾನಿಗಳಿಂದ ರಕ್ತದಾನ

ವಿಶ್ವ ರಕ್ತದಾನ ದಿನಾಚರಣೆ ಅಂಗವಾಗಿ ನೂರಾರು ಜನರಿಂದ ರಕ್ತದಾನ.

avatar

  • June 19, 2025
  • 1 minute read
  • 3 Likes
  • 217 Views
ವಿಶ್ವ ರಕ್ತದಾನ ದಿನಾಚರಣೆ ಅಂಗವಾಗಿ ದಾನಿಗಳಿಂದ ರಕ್ತದಾನ
ವಿಶ್ವ ರಕ್ತದಾನ ದಿನಾಚರಣೆ ಅಂಗವಾಗಿ ದಾನಿಗಳಿಂದ ರಕ್ತದಾನ

ವಿಶ್ವ ರಕ್ತದಾನ ದಿನಾಚರಣೆ ಅಂಗವಾಗಿ ಸಾರ್ವಜನಿಕರು ಮತ್ತು ಎ.ಎಲ್.ಎನ್.ರಾವ್ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳು ಚಿಕ್ಕಮಗಳೂರು ಜಿಲ್ಲಾ ರಕ್ತ ನಿಧಿಕೇಂದ್ರದವರಿಗೆ ತಮ್ಮ ರಕ್ತ ವನ್ನು ನೀಡಿ ರಕ್ತದಾನ ಶಿಬಿರ ಯಶಸ್ವಿ ಗೊಳಿಸಿದರು. ಇದಕ್ಕೂ ಮೊದಲು ಎ.ಎಲ್.ಎನ್.ರಾವ್.ಆಯುರ್ವೇದ ಕಾಲೇಜು ಸಭಾಂಗಣದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲಾ ರಕ್ತ ನಿಧಿ ಕೇಂದ್ರದ ಆದಿಕಾರಿಗಳಾದ ಡಾ ಮುರುಳೀಧರ್ ಅವರು ಭಾಗವಹಿಸಿ ರಕ್ತದಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಕೊಪ್ಪ ಸರ್ಕಾರಿ ಆಸ್ಪತ್ರೆಯ ಸಚಿನ್.ಮತ್ತು ಸಿಬ್ಬಂದಿಗಳು ಹಾಗೂ ಕಾಲೇಜು ಪ್ರಾಂಶುಪಾಲರಾದ ಡಾ ಸಂಜಯ ಕೆ.ಎಸ್. ಉಪ ಪ್ರಾಂಶುಪಾಲರಾದ ಡಾ ಪ್ರದೀಪ್, ಡಾ ಡಿ.ಕೆ.ಮಿಶ್ರ ಮತ್ತು ಎಲ್ಲಾ ಪ್ರಾಧ್ಯಾಪಕರು ಮತ್ತು ವಿಧ್ಯಾರ್ಥಿಗಳು ಭಾಗವಹಿಸಿದ್ದರು. ನಂತರ ಎ.ಎಲ್.ಎನ್.ರಾವ್ ಚಾರೀಟೆಬಲ್ ಆಸ್ಪತ್ರೆಯಲ್ಲಿ ಸುಮಾರು 100 ಕ್ಕೂ ಹೆಚ್ಚು ಜನರು ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು. ರಕ್ತದಾನ ಮಾಡಿದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಜ್ಯೂಸ್ ವ್ಯವಸ್ಥೆ ಕಾಲೇಜು ವತಿಯಿಂದ ಮಾಡಲಾಗಿತ್ತು. ಎ.ಎಲ್. ಎನ್.ರಾವ್. ಕಾಲೇಜಿನ ಕ್ರಿಯಾ ಶರೀರ ,ರೋಗನಿದಾನ ಮತ್ತು ಶಲ್ಯ ತಂತ್ರ ವಿಭಾಗದಿಂದ ಜಂಟಿಯಾಗಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

Gallery