ಕೊಪ್ಪ

ಆಯುರ್ವೇದ ಕಾಲೇಜಿನಲ್ಲಿ ರಕ್ತ ದಾನ ಶಿಬಿರ

ಆಯುರ್ವೇದ ಕಾಲೇಜು ವತಿಯಿಂದ ರಕ್ತದಾನ ಶಿಬಿರ

avatar

  • June 18, 2025
  • 1 minute read
  • 3 Likes
  • 157 Views
ಆಯುರ್ವೇದ ಕಾಲೇಜಿನಲ್ಲಿ ರಕ್ತ ದಾನ ಶಿಬಿರ
ಆಯುರ್ವೇದ ಕಾಲೇಜಿನಲ್ಲಿ ರಕ್ತ ದಾನ ಶಿಬಿರ

ಕೊಪ್ಪ ಎ.ಎಲ್.ಎನ್.ರಾವ್.ಆಯುರ್ವೇದ ಕಾಲೇಜು ವತಿಯಿಂದ ದಿನಾಂಕ 19-06-2025 ಗುರುವಾರ ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 1:00 ಗಂಟಯವರೆಗೆ ವಿಶ್ವ ರಕ್ತ ದಾನ ದಿನದ ಅಂಗವಾಗಿ ರಕ್ತ ದಾನ  ಶಿಬಿರ ನಡೆಯಲಿದ್ದು, ಆಯುರ್ವೇದ ಕಾಲೇಜಿನ ,ಕ್ರಿಯಾ ಶರೀರ, ರೋಗನಿದಾನ ಮತ್ತು ಶಲ್ಯತಂತ್ರ ವಿಭಾಗದ ವತಿಯಿಂದ ಈ ಶಿಬಿರ ಆಯೋಜಿಸಲಾಗಿದ್ದು, ಆಸಕ್ತ ರಕ್ತದಾನಿಗಳು ಬಂದು ರಕ್ತದಾನ ಮಾಡಿ ಈ ಶಿಬಿರದಲ್ಲಿ ಪಾಲ್ಗೊಳ್ಳಲು ಕಾಲೇಜು ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ವಿನಂತಿಸಿದ್ದಾರೆ. ಎಲ್ಲಾ ಗುಂಪಿನ ರಕ್ತ ವನ್ನು ಪಡೆಯಲಾಗುವುದು ,ನಂತರ ಚಿಕ್ಕಮಗಳೂರು ರಕ್ತನಿಧಿ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಮ್ಮ ರಕ್ತವನ್ನು ನೀಡಿ ಸಹಕರಿಸಬೇಕಾಗಿ ವಿನಂತಿ.