ಈ ಅಷಾಢ ಮಾಸದ ಆಟಿ ಅಮಾವಾಸ್ಯೆ ಪ್ರಯುಕ್ತ,
24-07-2025 ಗುರುವಾರದಂದು
ಎ.ಎಲ್.ಎನ್. ರಾವ್ ಸ್ಮಾರಕ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಕೊಪ್ಪದ
ದ್ರವ್ಯಗುಣ ವಿಜ್ಞಾನ, ರಸ ಶಾಸ್ತ್ರ ಮತ್ತು ಪಂಚಕರ್ಮ ವಿಭಾಗದಿಂದ
ಆಟಿ ಅಮಾವಾಸ್ಯೆ ಕಷಾಯ ವಿತರಣೆಯನ್ನು ಆಯೋಜಿಸಲಾಗಿದೆ.
ಈ ದಿನದಂದು ಸೇವಿಸುವ ಕಷಾಯವು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.ಆರೋಗ್ಯಕ್ಕೆ ಒಳ್ಳೆಯದು:
ಆಟಿ ಅಮಾವಾಸ್ಯೆಯಂದು ಸೇವಿಸುವ ಕಷಾಯವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.
ವಿಷಕಾರಿ ಅಂಶಗಳನ್ನು ತೆಗೆದುಹಾಕುತ್ತದೆ:
ಆಟಿ ತಿಂಗಳಲ್ಲಿ ಹೆಚ್ಚು ಮಳೆ ಮತ್ತು ಕ್ರಿಮಿ ಕೀಟಗಳ ಹಾವಳಿ ಇರುವುದರಿಂದ, ಕಷಾಯವು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.ಈ ಕಷಾಯವನ್ನು ತಯಾರಿಸಲು ಸಾಂಪ್ರದಾಯಿಕವಾಗಿ ಹಾಲೆ ಮರದ ತೊಗಟೆಯನ್ನು ಬಳಸುತ್ತಾರೆ, ಇದು ಔಷಧೀಯ ಗುಣಗಳನ್ನು ಹೊಂದಿದೆ.
ಅನಾರೋಗ್ಯವನ್ನು ತಡೆಯುತ್ತದೆ:
ಈ ಕಷಾಯವು ರೋಗರುಜಿನಗಳಿಂದ ದೂರವಿರಲು ಮತ್ತು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ ಎಂಬ ನಂಬಿಕೆಯಿದೆ.
ಸ್ಥಳ: ಆಸ್ಪತ್ರೆ ಆವರಣ
ಸಮಯ: ಬೆಳಿಗ್ಗೆ 6.00 ರಿಂದ 8.00 ರವರೆಗೆ
ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ
ಕಾಲೇಜು ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ವಿನಂತಿಸಿದ್ದಾರೆ.
ಮುಂಗಡ ನೋಂದಣಿಗಾಗಿ ಈ ದೂರವಾಣಿ ಸಂಖ್ಯೆಗೆ 7022181339 ಸಂಪರ್ಕಿಸಿ
ಕೊಪ್ಪ
"ಆಟಿ ಅಮವಾಸ್ಯೆ ಪ್ರಯುಕ್ತ ಉಚಿತ ಕಷಾಯ ವಿತರಣೆ"
ಈ ಅಷಾಢ ಮಾಸದ ಆಟಿ ಅಮಾವಾಸ್ಯೆ ಪ್ರಯುಕ್ತ, 24-07-2025 ಗುರುವಾರದಂದು ಎ.ಎಲ್.ಎನ್. ರಾವ್ ಸ್ಮಾರಕ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಕೊಪ್ಪದ ದ್ರವ್ಯಗುಣ ವಿಜ್ಞಾನ, ರಸ ಶಾಸ್ತ್ರ ಮತ್ತು ಪಂಚಕರ್ಮ ವಿಭಾಗದಿಂದ ಆಟಿ ಅಮಾವಾಸ್ಯೆ ಕಷಾಯ ವಿತರಣೆಯನ್ನು ಆಯೋಜಿಸಲಾಗಿದೆ.
ಹಿಂದಿನ ಸುದ್ದಿ
"ಕರ್ಕಾಟಕ ಚಿಕಿತ್ಸಾ ಶಿಬಿರ" ಆರಂಭ
Share this article
ಈ ವಿಭಾಗದ ಸುದ್ದಿಗಳು
" ರಾಷ್ಟ್ರೀಯ ಏಕತಾ ದಿನದ ಆಚರಣೆ ಅಂಗವಾಗಿ ಮ್ಯಾರಥಾನ್ "
2 weeks ago
"ಕೊಪ್ಪ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಕ್ಕೆ ಬ್ರೇಕ್"
4 weeks ago
ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗಬೇಡಿ.
1 month ago