ಕೊಪ್ಪ

*ಆಟಿ ಕಷಾಯ ಸೇವಿಸಿದ ಸಾರ್ವಜನಿಕರಿಂದ ಆಯುರ್ವೇದ ಕಾಲೇಜಿಗೆ ಪ್ರಶಂಸೆ*

ಆಟಿ ಅಮವಾಸ್ಯೆ ಕಷಾಯ ತಯಾರಿಸಿ ಉಚಿತವಾಗಿ ವಿತರಿಸಿದ ಎ.ಎಲ್.ಎನ್.ರಾವ್ ಆಯುರ್ವೇದ ಕಾಲೇಜು. ಸಾರ್ವಜನಿಕರಿಂದ ಉತ್ತಮ ಸ್ಪಂದನೆ.

avatar

  • July 24, 2025
  • 1 minute read
  • 6 Likes
  • 518 Views
*ಆಟಿ ಕಷಾಯ ಸೇವಿಸಿದ ಸಾರ್ವಜನಿಕರಿಂದ ಆಯುರ್ವೇದ ಕಾಲೇಜಿಗೆ ಪ್ರಶಂಸೆ*
*ಆಟಿ ಕಷಾಯ ಸೇವಿಸಿದ ಸಾರ್ವಜನಿಕರಿಂದ ಆಯುರ್ವೇದ ಕಾಲೇಜಿಗೆ ಪ್ರಶಂಸೆ*

*ಆಟಿ ಅಮಾವಾಸ್ಯೆಯಂದು ಎ.ಎಲ್.ಎನ್.ರಾವ್. ಆಯುರ್ವೇದ ಕಾಲೇಜಿನಲ್ಲಿ ಸಾಂಪ್ರದಾಯಿಕ ಆಟಿ ಕಷಾಯ ಉಚಿತ ವಿತರಣೆ:- *ಸಾರ್ವಜನಿಕರ ಪ್ರಶಂಸೆ*.


ದಿನಾಂಕ 24-7 2025ರ ಗುರುವಾರ ಆಟಿ ಅಮವಾಸ್ಯೆ ಪ್ರಯುಕ್ತ ಕೊಪ್ಪದ ಎ.ಎಲ್.ಎನ್.ರಾವ್.
ಆಯುರ್ವೇದ ಕಾಲೇಜಿನ ದ್ರವ್ಯಗುಣ,ರಸಶಾಸ್ತ್ರ ವಿಭಾಗದ ವತಿಯಿಂದ ಸಾರ್ವಜನಿಕರಿಗೆ ಸಾಂಪ್ರದಾಯಿಕವಾಗಿ ತಯಾರಿಸಿದ ಔಷಧೀಯ ಗುಣಗಳನ್ನು ಹೊಂದಿದ ಆಟಿ ಕಷಾಯವನ್ನು ಉಚಿತವಾಗಿ ವಿತರಿಸಲಾಯಿತು. ಅಂದೇ ಬೆಳಿಗ್ಗೆ ಕಾಲೇಜಿನ ಫಾರ್ಮಸಿಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ವಿವಿಧ ಗುಣವುಳ್ಳ ಹಾಲೆಮರದ ಚಕ್ಕೆ, ಶುಂಠಿ,ಕಾಳಮೆಣಸು,ಬೆಳ್ಳುಳ್ಳಿ ಮುಂತಾದ ಉಪಯುಕ್ತ ಪದಾರ್ಥಗಳನ್ನು ಉಪಯೋಗಿಸಿ ಸುಮಾರು ಎರಡು ಗಂಟೆಗಳ ಒಳಗೆ ತಯಾರಿಸಿ.ಬೆಳಿಗ್ಗೆ ಆರು ಗಂಟೆಯಿಂದ ಎಂಟು ಗಂಟೆಗಳವರೆಗೆ ಸಾರ್ವಜನಿಕರಿಗೆ ಉಚಿತ ಬಿ.ಪಿ.ತಪಾಸಣೆ ಸಹ ನಡೆಸಿ ಕಷಾಯ ವಿತರಿಸಲಾಯಿತು. ಬೆಳಿಗ್ಗೆಯಿಂದಲೇ ಕಷಾಯ ಸೇವಿಸಲು ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತಿದ್ದು ವಿಶೇಷವಾಗಿತ್ತು. ಕಾಲೇಜಿನ ಪ್ರಾಂಶುಪಾಲರಾದ ಡಾ: ಸಂಜಯ ಕೆ.ಎಸ್. ಅವರ ಮಾರ್ಗದರ್ಶನದಂತೆ ದ್ರವ್ಯಗುಣ ವಿಭಾಗದ ಡಾ ಪಂಕಜ್ ಮತ್ತು ಡಾ ಕೃಷ್ಣ ಕಿಶೋರ್ ಹಾಗೂ ತಂಡ ಮತ್ತು ರಸಶಾಸ್ರ್ರ ವಿಭಾಗದ ಡಾ ಡಿ.ಕೆ.ಮಿಶ್ರ ಹಾಗೂ ಕಾಲೇಜಿನ ಪಿ.ಜಿ. ವಿಭಾಗದ ವೈಧ್ಯಕೀಯ ವಿಧ್ಯಾರ್ಥಿಗಳು ಹಾಗೂ ಇತರ ವಿಧ್ಯಾರ್ಥಿಗಳು ಬಹಳ ಅಚ್ಚು ಕಟ್ಟಾಗಿ ಕಷಾಯ ತಯಾರಿಸಿದ್ದರು. ಪ್ರಥಮ ಬಾರಿಗೆ ಇಂತಹ ಸಾಂಪ್ರದಾಯಿಕ ಶೈಲಿಯ ಆಚರಣೆಯ ಕಷಾಯ ವಿತರಣೆಗೆ ಸಾರ್ವಜನಿಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಯಿತು ಮತ್ತು ಸುಮಾರು 300 ಕ್ಕೂ ಅಧಿಕ ಜನರು ಬಂದು ಇದರ ಸದುಪಯೋಗ ಪಡೆದುಕೊಂಡರು.ಇಂತಹ ಒಂದು ವ್ಯವಸ್ಥೆ ಕಲ್ಪಿಸಿದ ವ್ಯವಸ್ಥಾಪಕರಾದ ಆರೂರು ಶ್ರೀರಮೇಶ್ ರಾವ್ ಮತ್ತು ಟ್ರಸ್ಟಿ ಶ್ರೀ ಮತಿ ನಮಿತಾ ರಾವ್ ಅವರಿಗೆ ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದ್ದಾರೆ.