ಕೊಪ್ಪ

ಆಯುರ್ವೇದ ಕಾಲೇಜಿನಲ್ಲಿ ನೂತನ ಮಾದರಿಯ ಕೌಶಲ್ಯ ಪ್ರಯೋಗಾಲಯ ಉದ್ಘಾಟನೆ.

ಕೊಪ್ಪ ಆಯುರ್ವೇದ ಕಾಲೇಜಿನಲ್ಲಿ ಕೌಶಲ್ಯ ಪ್ರಯೋಗಾಲಯದ ಉದ್ಘಾಟನೆ.

avatar

  • May 21, 2025
  • 1 minute read
  • 6 Likes
  • 599 Views
ಆಯುರ್ವೇದ ಕಾಲೇಜಿನಲ್ಲಿ ನೂತನ ಮಾದರಿಯ ಕೌಶಲ್ಯ ಪ್ರಯೋಗಾಲಯ ಉದ್ಘಾಟನೆ.
ಆಯುರ್ವೇದ ಕಾಲೇಜಿನಲ್ಲಿ ನೂತನ ಮಾದರಿಯ ಕೌಶಲ್ಯ ಪ್ರಯೋಗಾಲಯ ಉದ್ಘಾಟನೆ.

ಕೊಪ್ಪ  ಎ.ಎಲ್.ಎನ್.ರಾವ್.ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ನೂತನ ಕೌಶಲ್ಯ ಪ್ರಯೋಗಾಲಯ ಉದ್ಘಾಟನೆ.
ದಿನಾಂಕ 21-5-2025 ಬುಧವಾರ
 ಕೊಪ್ಪ ದ ಪ್ರತಿಷ್ಠಿತ ಎ.ಎಲ್.ಎನ್.ರಾವ್.ಆಯುರ್ವೇದ ಕಾಲೇಜಿನಲ್ಲಿ ನವೀನ ಮಾದರಿಯ ಕೌಶಲ್ಯ ಪ್ರಯೋಗಾಲಯವನ್ನು ಕಾಲೇಜು ಆಡಳಿತ ಮಂಡಳಿಯ ಟ್ರಸ್ಟಿ ಶ್ರೀ ಮತಿ ನಮಿತಾ ರಾವ್ ಉದ್ಘಾಟಿಸಿದರು. ಆಯುರ್ವೇದ ಕಾಲೇಜು ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಕಲಿಕೆ ಗೆ ಹೆಚ್ಚಿನ ಅನುಕೂಲ ಆಗುವ ದೃಷ್ಟಿಯಿಂದ ಈ ನೂತನ ಮಾದರಿಯ ಕೌಶಲ್ಯ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಈ ಪ್ರಯೋಗಾಲಯದಲ್ಲಿ ಮಾನವ ಮಾದರಿಯ ಗೊಂಬೆಯ ಮಾಡೆಲ್ ಗಳನ್ನು ಇಡಲಾಗಿದ್ದು, ಇದಕ್ಕೆ ನೂತನ ವಿದ್ಯುತ್ ತಂತ್ರಜ್ಞಾನ ಅಳವಡಿಸಲಾಗಿದ್ದು, ಮನುಷ್ಯನ ದೇಹದ ವಿವಿಧ ಅಂಗಗಳ ಬಗ್ಗೆ ವೈದ್ಯಕೀಯ ವಿದ್ಯಾರ್ಥಿಗಳು ಸುಲಭವಾಗಿ ತಿಳಿದುಕೊಳ್ಳಲು ಇದು ಸಹಾಯವಾಗಲಿದೆ. ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲರಾದ ಡಾ: ಸಂಜಯ ಕೆ.ಎಸ್.ಉಪ ಪ್ರಾಂಶುಪಾಲರಾದ ಡಾ: ಪ್ರದೀಪ್, ಡಾ: ಪ್ರಶಾಂತ್ ಭಟ್ ಸೇರಿದಂತೆ ಕಾಲೇಜಿನ ಎಲ್ಲಾ ವೈದ್ಯ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.