ಕೊಪ್ಪ

ಕೊಪ್ಪದಲ್ಲಿ ತಿರಂಗಾ ಯಾತ್ರೆ

ಕೊಪ್ಪದಲ್ಲಿ ಅದ್ದೂರಿಯಾಗಿ ನಡೆದ ತಿರಂಗಾ ಯಾತ್ರೆ. ಮಾಜಿ ಸೈನಿಕರು ಭಾಗಿ.

avatar

  • May 19, 2025
  • 1 minute read
  • 8 Likes
  • 983 Views
ಕೊಪ್ಪದಲ್ಲಿ ತಿರಂಗಾ ಯಾತ್ರೆ
ಕೊಪ್ಪದಲ್ಲಿ ತಿರಂಗಾ ಯಾತ್ರೆ

ದಿನಾಂಕ 19-5-2025 ಸೋಮವಾರ ಮಧ್ಯಾಹ್ನ ಕೊಪ್ಪ ಪಟ್ಟಣದಲ್ಲಿ ರಾಷ್ಟ್ರದ ಸೈನಿಕರಿಗೆ ಬಲ ತುಂಬಲು ಹಾಗೂ ಕಳೆದವಾರ ಪಹಲ್ಗಾಮ್ ಉಗ್ರರ ತಾಣ ನಾಶ ಪಡಿಸಿದ ಆಪರೇಷನ್ ಸಿಂಧೂರ್ ಗೆ ಧನ್ಯವಾದಗಳನ್ನು ಸಮರ್ಪಿಸುವ ಸಲುವಾಗಿ ರಾಷ್ಟ್ರಭಕ್ತರ ನೇತೃತ್ವದಲ್ಲಿ ಸುಮಾರು 400 ಮೀಟರ್ ಉದ್ದದ ರಾಷ್ಟ್ರ ಧ್ವಜವನ್ನು ಹಿಡಿದು ತಿರಂಗಾ ಯಾತ್ರೆ ನಡೆಸಲಾಯಿತು. ಕೊಪ್ಪ ಪಟ್ಟಣದ ಶ್ರೀ ವೀರಭದ್ರ ದೇವಸ್ಥಾನದ ಆವರಣದಿಂದ ಹೊರಟ ತಿರಂಗಾ ಯಾತ್ರೆ ಕೊಪ್ಪ ಬಸ್ ನಿಲ್ದಾಣದ ವರೆಗೆ ಸಾಗಿತು. ನಂತರ ರಾಷ್ಟ್ರಪ್ರೇಮದ ಘೋಷಣೆ ಕೂಗಿ ,ರಾಷ್ಟ್ರ ಗೀತೆ ಹಾಡಿ ತಿರಂಗಾ ಯಾತ್ರೆ ಮುಕಾಯಗೊಂಡಿತು. ಅದ್ದೂರಿಯಾಗಿ ನಡೆದ ಈ ತಿರಂಗಾ ಯಾತ್ರೆಯಲ್ಲಿ, ಮಾಜಿ ಸೈನಿಕರು, ಮಾಜಿ ಸಚಿವರಾದ ಶ್ರೀ ಡಿ .ಎನ್.ಜೀವರಾಜ್, ಪಟ್ಟಣ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು, ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು, ಕಾಲೇಜು ವಿದ್ಯಾರ್ಥಿಗಳು, ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.