Police ಚಿಕ್ಕಮಗಳೊರು ಕೊಪ್ಪ

" ಬಡವರ ಸಾಧನೆ ಗುರುತಿಸಿ ಸನ್ಮಾನಿಸಿದ ಪೋಲಿಸ್ ಠಾಣಾಧಿಕಾರಿ"

ಕೊಪ್ಪ ಪೋಲಿಸ್ ಠಾಣಾಧಿಕಾರಿ ಶ್ರೀ ಬಸವರಾಜ್ ಅವರಿಂದ ಬಡವರ ಕಾರ್ಯ ಗುರುತಿಸಿ ಸನ್ಮಾನ ಮತ್ತು ಗೌರವ.

avatar

  • August 10, 2025
  • 1 minute read
  • 3 Likes
  • 1017 Views
" ಬಡವರ ಸಾಧನೆ ಗುರುತಿಸಿ ಸನ್ಮಾನಿಸಿದ ಪೋಲಿಸ್ ಠಾಣಾಧಿಕಾರಿ"
" ಬಡವರ ಸಾಧನೆ ಗುರುತಿಸಿ ಸನ್ಮಾನಿಸಿದ ಪೋಲಿಸ್ ಠಾಣಾಧಿಕಾರಿ"

ಕೊಪ್ಪ ಪಟ್ಟಣದ ಪೋಲಿಸ್ ಠಾಣಾಧಿಕಾರಿ ಬಸವರಾಜ್ ಅವರು ಈ ಹಿಂದಿನಿಂದಲೂ ಸಮಾಜ ಮುಖಿ ಕಾರ್ಯಗಳ ಮುಖಾಂತರ ಸಾರ್ವಜನಿಕ ವಲಯದಲ್ಲಿ ಬಹಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಮತ್ತೊಂದು ವಿಶೇಷ ಕಾರ್ಯಕ್ರಮದ ಮೂಲಕ ಕೊಪ್ಪ ಪೋಲಿಸ್ ಠಾಣೆಯ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಹೋಗುವಂತೆ ಮಾಡಿರುತ್ತಾರೆ. ಕೊಪ್ಪ ಪಟ್ಟಣದಲ್ಲಿ ವಾಸವಾಗಿರುವ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಯಾವುದೇ ರೀತಿಯ ಪೋಸ್ಟ್ ಮಾರ್ಟಮ್ ಗೆ ಬರುವ ಶವಗಳನ್ನು ತ್ವರಿತ ರೀತಿಯಲ್ಲಿ ಪೋಸ್ಟ್ ಮಾರ್ಟಮ್ ಮಾಡಿ ಅದರ ವರದಿ ನೀಡಲು ಪೋಲಿಸ್ ಇಲಾಖೆಗೆ ಸಹಾಯ ಮಾಡುತ್ತಿರುವ ನೌಕರರಾದ ಶ್ರೀ ರಾಜಣ್ಣ ಮತ್ತು ಹೋಟೆಲ್ ಒಂದರಲ್ಲಿ ಕ್ಲೀನಿಂಗ್ ಕೆಲಸ ಮಾಡುವ ಶ್ರೀ ಚಂದ್ರಶೇಖರ್ ಅವರು ಹಲವಾರು ಶಾಲೆಗಳ ಮಕ್ಕಳಿಗೆ ತನಗೆ ಬರುವ ಅಲ್ಪ ಆದಾಯದಲ್ಲಿ ನೋಟ್ ಪುಸ್ತಕ ನೀಡುತ್ತಿರುವುದನ್ನು ತಿಳಿದು ಕೊಂಡು ,ಇಬ್ಬರನ್ನೂ ಕೊಪ್ಪ ಪೋಲಿಸ್ ಠಾಣೆಗೆ ಕರೆಸಿ ಸನ್ಮಾನಿಸಿ ಗೌರವಿಸುವಲ್ಲಿ ಮಹತ್ತರವಾದ ಪಾತ್ರವನ್ನು ಕೊಪ್ಪ ಪೋಲಿಸ್ ಠಾಣಾಧಿಕಾರಿ ಶ್ರೀ ಬಸವರಾಜ್ ನಿರ್ವಹಿಸಿರುತ್ತಾರೆ. ಇವರ ಈ ರೀತಿಯ ಕಾರ್ಯದಿಂದ  ಉಳಿದವರು ಸಹ ಪ್ರೇರಣೆಯಿಂದ ಇನ್ನೂ ಹೆಚ್ಚಿನ ಸಾಮಾಜಿಕ ಕಾರ್ಯ ಮಾಡುವುದರಲ್ಲಿ ಯಾವುದೇ ಆಶ್ಚರ್ಯ ವಿಲ್ಲ. ಇವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಬಹಳ ಮೆಚ್ಚುಗೆ ವ್ಯಕ್ತ ವಾಗಿದ್ದು, ಇಂತಹ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳ ನಡೆಯನ್ನು ಉಳಿದವರು ಸಹ ಅನುಸರಿಸಲಿ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವರ ಈ ಕಾರ್ಯಗಳು ಹೀಗೆ ಮುಂದುವರೆಯಲಿ ಎಂದು ಕಾಫಿನಾಡು ನ್ಯೂಸ್ ನ ಅಭಿಮತ.