ಚಿಕ್ಕಮಗಳೊರು ಕೊಪ್ಪ ಕಲೆ ಮತ್ತು ಸಂಸ್ಕೃತಿ ಜಯಪುರ

"ರಾಷ್ಟ್ರೀಯ ಕೈಮಗ್ಗ ದಿನಾಚರಣೆ"

ಕೊಪ್ಪ ದ ಮಹಿಳಾ ಮೊರ್ಚಾ ವತಿಯಿಂದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ .

avatar

  • August 7, 2025
  • 1 minute read
  • 3 Likes
  • 267 Views
"ರಾಷ್ಟ್ರೀಯ ಕೈಮಗ್ಗ ದಿನಾಚರಣೆ"
"ರಾಷ್ಟ್ರೀಯ ಕೈಮಗ್ಗ ದಿನಾಚರಣೆ"

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪಮಂಡಲ ಮಹಿಳಾ ಮೋರ್ಚಾದ ವತಿಯಿಂದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ  30 ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡಿರುವ ಜಯಪುರದ ಬಟ್ಟೆ ಉದ್ಯಮಿಗಳು ನಂದಿನಿ ಕ್ರಿಯೇಷನ್ ಸಂಸ್ಥೆಯ ಮಾಲೀಕರು ಆದ ಜಗದೀಶ್ ದಂಪತಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಗದೀಶ್ ರವರ ನಂದಿನಿ ಕ್ರಿಯೇಷನ್ ಸಂಸ್ಥೆಯ ಗಾರ್ಮೆಂಟ್ಸ್ ನಲ್ಲಿ ತಯಾರಾಗುವ ಬಟ್ಟೆಗಳ ಬಗ್ಗೆ ಹಾಗೂ ಅಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳ ಜೊತೆ ಅವರ ಸಂಸ್ಥೆಗೆ ಇರುವ ಒಡನಾಟ ತಾವು ಬೆಳೆದು ಬಂದ ಹಾದಿಯ ಬಗ್ಗೆ ಮತ್ತು ತಮ್ಮ ಉದ್ಯಮಕ್ಕೆ ಬಳಸಿಕೊಂಡ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.. ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರುತಿರೋಹಿತ್,ಮಹಿಳಾ ಮೋರ್ಚಾ ಮಂಡಲ ಅಧ್ಯಕ್ಷರಾದ ಅನುಸೂಯ ಕೃಷ್ಣಮೂರ್ತಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರೇಖಾ ಪಟೇಲ್ ಮತ್ತು ಅಂಬಿಕಾ, ರೈತ ಮೋರ್ಚಾ ತಾಲೂಕು ಅಧ್ಯಕ್ಷರಾದ ಸಂತೋಷ್ ಅರೆನೂರು, ರಾಜ್ಯ ನೇಕಾರರ ಪ್ರಕೋಷ್ಟದ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು , ಬಿಎಸ್ಏನ್ಎಲ್ ಸಮಿತಿಯ ನಾಮ ನಿರ್ದೇಶನ ಸದಸ್ಯರಾಗಿರುವ ವಿನೋದ್, ತಾಲೂಕು ಜವಳಿ ಮತ್ತು ಕೈಮಗ್ಗ ಮಂಡಳಿಯ ಅಧ್ಯಕ್ಷರಾಗಿರುವ ಲಲಿತ, ಜಯಪುರ ಗ್ರಾಮ ಪಂಚಾಯಿತಿ ಸದಸ್ಯರಾಗಿರುವ ನಳಿನ ಗುರುಮೂರ್ತಿ ಮತ್ತು ರಮ್ಯ, ಕೊಪ್ಪ ಗ್ರಾಮಾಂತರ ಪಂಚಾಯತ್ ಸದಸ್ಯರಾಗಿರುವ ಸರಸ್ವತಿ, ಮಹಿಳಾ ಮೋರ್ಚ ಸದಸ್ಯರಾಗಿರುವ ಅನುಪಮಾ ದಿನೇಶ್ ಹಾಗೂ ಲೋಕನಾಥಪುರ ಕೋಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿರುವ ನಾಗರತ್ನ ಕಲ್ಕೆರೆ ಸೇರಿದಂತೆ ಸಾರ್ವಜನಿಕರು ಮತ್ತು ಗಾರ್ಮೆಂಟ್ಸ್ನ ಸಿಬ್ಬಂದಿಗಳು ಉಪಸ್ಥಿತರಿದ್ದರು.