ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕರೆ ನೀಡಿದ ಕೊಪ್ಪ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು .ಕೊಪ್ಪ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಬಸ್ ಸಂಚಾರ ವಿರಳವಾಗಿದ್ದು, ಖಾಸಗಿ ವಾಹನಗಳು ಮಾತ್ರ ಸಂಚಾರಕ್ಕೆ ಮುಕ್ತವಾಗಿತ್ತು. ಶಾಲಾ ಕಾಲೇಜುಗಳು ಬೇಸಿಗೆ ರಜೆ ಇದ್ದುದರಿಂದ ಬಂದ್ ಬಿಸಿಯಿಂದ ಹೊರಗುಳಿದವು. ಎ.ಎಲ್.ಎನ್.ರಾವ್. ಆಯುರ್ವೇದ ವೈದ್ಯಕೀಯ ಕಾಲೇಜಿನವರು ಸಂಘಟಕರ ಮನವಿಯ ಮೇರೆಗೆ ತರಗತಿಗಳನ್ನು ರದ್ದುಪಡಿಸಿ ಬಂದ್ ಗೆ ಸಹಕಾರ ನೀಡಿದರು.ಇನ್ನುಳಿದಂತೆ ಹಣ್ಣು, ತರಕಾರಿ,ಬೇಕರಿ ,ಹೋಟೆಲ್, ಸೇರಿದಂತೆ ಎಲ್ಲಾ ವ್ಯಾಪಾರ ವಹಿವಾಟು ಬಂದ್ ಮಾಡಲಾಗಿತ್ತು. ವೈದ್ಯಕೀಯ ಸೇವೆ ಮತ್ತು ಮೆಡಿಕಲ್ ಶಾಪ್ ಮತ್ತು ಪೆಟ್ರೋಲ್ ಬಂಕ್ ಎಂದಿನಂತೆ ಕಾರ್ಯನಿರ್ವಹಣೆಯಲ್ಲಿತ್ತು.
ಒಟ್ಟಿನಲ್ಲಿ ಬಂದ್ ಸಂಪೂರ್ಣವಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸಂಘಟನೆಗಳು ಯಶಸ್ವಿ ಯಾದವು.