ಕೊಪ್ಪ

ಕೊಪ್ಪ ಪಟ್ಟಣ ಪಂಚಾಯತಿ ನೂತನ ಅಧ್ಯಕ್ಷೆಯಾಗಿ ಶ್ರೀ ಮತಿ ರೇಖಾ ಪ್ರಕಾಶ್ ಅಧಿಕಾರ ಸ್ವೀಕಾರ

ಪಟ್ಟಣ ಪಂಚಾಯತಿ ಅಧ್ಯಕ್ಷರಾಗಿ ಶ್ರೀ ಮತಿ ರೇಖಾ ಪ್ರಕಾಶ್ ಅಧಿಕಾರ ಸ್ವೀಕರಿಸಿದರು

avatar

  • May 5, 2025
  • 1 minute read
  • 8 Likes
  • 1345 Views
ಕೊಪ್ಪ ಪಟ್ಟಣ ಪಂಚಾಯತಿ ನೂತನ ಅಧ್ಯಕ್ಷೆಯಾಗಿ ಶ್ರೀ ಮತಿ ರೇಖಾ ಪ್ರಕಾಶ್ ಅಧಿಕಾರ ಸ್ವೀಕಾರ
ಕೊಪ್ಪ ಪಟ್ಟಣ ಪಂಚಾಯತಿ ನೂತನ ಅಧ್ಯಕ್ಷೆಯಾಗಿ ಶ್ರೀ ಮತಿ ರೇಖಾ ಪ್ರಕಾಶ್ ಅಧಿಕಾರ ಸ್ವೀಕಾರ

ಕೊಪ್ಪ ಪಟ್ಟಣ ಪಂಚಾಯತಿ ನೂತನ ಅಧ್ಯಕ್ಷರಾಗಿ ಶ್ರೀ ಮತಿ ರೇಖಾ ಪ್ರಕಾಶ್  ಅವರು ಅಧಿಕಾರ ಸ್ವೀಕರಿಸಿದರು. ಉಪಾಧ್ಯಕ್ಷರಾಗಿ ಶ್ರೀ ಮತಿ ಗಾಯಿತ್ರಿ ಶೆಟ್ಟಿ ಅವರನ್ನು ಮುಂದುವರಿಸಲಾಯಿತು. ಶ್ರೀ ಮತಿ‌ ರೇಖಾಪ್ರಕಾಶ್ ಅವರು ಈ ಹಿಂದಿನ ಅವಧಿಯಲ್ಲಿ ಸ್ಥಾಯಿಸಮಿತಿ ಅಧ್ಯಕ್ಷೆಯಾಗಿ ಸಹ ಕಾರ್ಯನಿರ್ವಹಿಸಿದ್ದು, ಇನ್ನಿರುವ ಅವಧಿಯಲ್ಲಿ ಕೊಪ್ಪ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಲಿ ಎಂದು ಬಿ.ಜೆ.ಪಿ. ನಗರ ಘಟಕದ  ಪ್ರಧಾನ ‌ಕಾರ್ಯದರ್ಶಿ ಸಿ.ಹೆಚ್.ಪ್ರಕಾಶ್ ಅವರು ಅಧಿಕಾರ ವಹಿಸಿಕೊಂಡ ಅಧ್ಯಕ್ಷರನ್ನು‌ ಅಭಿನಂದಿಸಿ ಮಾತನಾಡಿದರು. ಮಾಜಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಶ್ರೀ ಮತಿ ಗಾಯತ್ರಿ ವಸಂತ್, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀ ಇದಿನಬ್ಬ ಇಸ್ಮಾಯಿಲ್ ,ಸದಸ್ಯರಾದ ಸುಜಾತ ವಸಂತ್, ಹೇಮಾವತಿ ಮತ್ತು ಪಟ್ಟಣ ಪಂಚಾಯತಿ ಸಿಬ್ಬಂದಿಗಳು ,ಸಾರ್ವಜನಿಕರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.