ಕೊಪ್ಪ ಎ.ಎಲ್.ಎನ್.ರಾವ್.ಅಯುರ್ವೇದ
ಕಾಲೇಜಿನಲ್ಲಿ
" ವ್ಯಾಸ ತರಂಗ " ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ:-
ದಿನಾಂಕ 19-4-2025 ರಂದು ಶನಿವಾರ ಮಧ್ಯಾಹ್ನ ಕೊಪ್ಪದ ಪ್ರತಿಷ್ಠಿತ ಎ.ಎಲ್.ಎನ್.ರಾವ್.ಆಯುರ್ವೇದ ಕಾಲೇಜು ಸಭಾಂಗಣದಲ್ಲಿ ಕಲೆ ಮತ್ತು ಸಾಹಿತ್ಯ ಹಾಗೂ ಮಾಧ್ಯಮ ಕ್ಷೇತ್ರ ಒಳಗೊಂಡ "ವ್ಯಾಸ ತರಂಗ" ಎಂಬ ವಿನೂತನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ನೆರವೇರಿತು. ಕೊಪ್ಪ ತಾಲ್ಲೂಕಿನ ಸಾಹಿತಿ ,ಲೇಖಕಿ ಶ್ರೀ ಮತಿ ಎಸ್.ಎನ್.ಚಂದ್ರಕಲಾ ಮತ್ತು ಪತ್ರಕರ್ತರಾದ ಶ್ರೀ ಉದಯಕುಮಾರ್ ಜೈನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮತಿ ಚಂದ್ರಕಲಾ ಅವರು ,ಪ್ರಸ್ತುತ ಸನ್ನಿವೇಶದಲ್ಲಿ ಮನಸ್ಸು ಏಕಾಗ್ರತೆ ಸಾಧಿಸಬೇಕಾದರೆ ಲಲಿತ ಕಲೆ ಮತ್ತು ಸಾಹಿತ್ಯ ಅತ್ಯಗತ್ಯ ಎಂದು ತಿಳಿಸಿ, ಇಂತಹ ವೇದಿಕೆಗಳಿಂದ ವೈದ್ಯಕೀಯ ವಿದ್ಯಾರ್ಥಿಗಳ ಮಾನಸಿಕ ಸಮತೋಲನ ಮತ್ತಷ್ಟು ಬೆಳವಣಿಗೆಗೆ ಸಹಕಾರಿಯಾಗುತ್ತದೆ ಮತ್ತು ಮನಸ್ಸಿನ ಭಾವನೆಗಳನ್ನು ಹತೋಟಿಗೆ ತರಲು ಸಹಕಾರಿಯಾಗುತ್ತದೆ ಎಂದರು. ಪತ್ರಕರ್ತ ಶ್ರೀ ಉದಯಕುಮಾರ್ ಜೈನ್ ಅವರು ಮಾತನಾಡಿ, ವಿದ್ಯಾರ್ಥಿಗಳು ದಿನ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಮತ್ತು ಪ್ರಸ್ತುತ ಬೆಳೆಯುತ್ತಿರುವ ವಿದ್ಯನ್ಮಾನ ಮಾದ್ಯಮಗಳ ಉಪಯೋಗ ಪಡೆದು ಪ್ರಪಂಚದ ವಿಚಾರಗಳನ್ನು ತಿಳಿದುಕೊಳ್ಳುವ ಮೂಲಕ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ "ವ್ಯಾಸ ತರಂಗ" ವಿದ್ಯಾರ್ಥಿ ವೇದಿಕೆಯ ಲಾಂಛನ ಬಿಡುಗಡೆಗೊಳಿಸಲಾಯಿತು ಮತ್ತು ವೇದಿಕೆಯ ಸದಸ್ಯರಿಗೆ ಬ್ಯಾಡ್ಜ್ ಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಕಲಾಭಿರುಚಿಯ ಸ್ಪರ್ಧೆ ಗಳನ್ನು ಏರ್ಪಡಿಸಲಾಗಿತ್ತು. ಮತ್ತು ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎ.ಎಲ್.ಎನ್.ರಾವ್.
ಆಯುರ್ವೇದ ಕಾಲೇಜು ಟ್ರಸ್ಟಿ
ಶ್ರೀ ಮತಿ ನಮಿತಾ ರಾವ್.ಪ್ರಾಂಶುಪಾಲರಾದ ಡಾ: ಸಂಜಯ ಕೆ.ಎಸ್. ಉಪ ಪ್ರಾಂಶುಪಾಲರಾದ ಡಾ ಡಿ.ಕೆ.ಮಿಶ್ರಾ,ಡಾ: ಪ್ರದೀಪ್ ಹೆಚ್.ಆರ್. ಕಾರ್ಯಕ್ರಮ ನಿರ್ದೇಶಕರಾದ ಡಾ: ಪೂಜಾ ಹುಯಿಲಗೋಳ, ಪ್ರಾಧ್ಯಾಪಕರಾದ ಶ್ರೀ ಪ್ರಕಾಶ್ ಸಿ.ಹೆಚ್,ಡಾ.ರಮ್ಯಶ್ರೀ ಭಟ್, ಕಾಲೇಜಿನ ಎಲ್ಲಾ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.