ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರನ್ನು ಗುರಿ ಮಾಡಿ ಮುಸಲ್ಮಾನ ಉಗ್ರರು ನಡೆಸಿದ ಭೀಕರ ಹತ್ಯಾಕಾಂಡವನ್ನು ಖಂಡಿಸಿ ಹಾಗೂ ಮಡಿದವರಿಗೆ ಇಂದು ಕೊಪ್ಪದ ಬಸ್ ನಿಲ್ದಾಣದ ಆವರಣದಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಿ ಕ್ಯಾಂಡಲ್ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮತ್ತು ಈ ಸಂದರ್ಭದಲ್ಲಿ ಕೊಪ್ಪ ಮೂಲದವರಾದ ಶಿವಮೊಗ್ಗ ವಾಸಿ ಮಂಜುನಾಥ್ ರಾವ್ ಅವರ ಭಾವಚಿತ್ರವನ್ನು ಇರಿಸಿ ಸಾರ್ವಜನಿಕರು ಪುಷ್ಪ ನಮನ ಸಲ್ಲಿಸಿದರು. ಬಿ.ಜೆ.ಪಿ.ಮಹಿಳಾ ಮೊರ್ಚಾದ ಶೃತಿ ರೋಹಿತ್ ಮತ್ತು ಕೊಪ್ಪ ಬಿ.ಜೆ.ಪಿ.ಮಂಡಲದ ಅಧ್ಯಕ್ಷರಾದ ದಿನೇಶ್ ಹೊಸೂರು ಅವರು ಮಾತನಾಡಿ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದರು ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಿಂದೂಗಳಿಗೆ ಸೂಕ್ತ ರಕ್ಷಣೆ ಒದಗಿಸಿ , ದಾಳಿ ಕೋರರನ್ನು ಹತ್ತಿಕ್ಕಲು ಸರ್ವ ಪ್ರಯತ್ನ ಮಾಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಹಿರಿಯರಾದ ಶ್ರೀ ಬಿ.ಕೆ.ಗಣೇಶ್ ರಾವ್, ರಾಮಸ್ವಾಮಿ ಶೆಟ್ಟಿಗದ್ದೆ, ಸತೀಶ್ ಅದ್ದಡ, ಜಗದೀಶ್ ನುಗ್ಗಿ, ರೇವಂತ್, ಅನೂಪ್ ನಾರ್ವೆ, ಅನಸೂಯಾ ಕೃಷ್ಣ ಮೂರ್ತಿ, ಪದ್ಮಾವತಿ ರಮೇಶ್, ದಿವಾಕರ್, ಪ್ರಕಾಶ್ ಸಿ.ಹೆಚ್. ಉದಯಕುಮಾರ್ ಜೈನ್ ಮತ್ತು ಪಟ್ಟಣ ಪಂಚಾಯತಿ ಸದಸ್ಯರಾದ ಸುಜಾತ ವಸಂತ್, ಗಾಯಿತ್ರಿ ಶೆಟ್ಟಿ, ರೇಖಾಪ್ರಕಾಶ್, ಇದಿನಬ್ಬ , ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಬಿ.ಜೆ.ಪಿ.ಕಾರ್ಯಕರ್ತರು ,ಪದಾಧಿಕಾರಿಗಳು ,ಸಾರ್ವಜನಿಕರು ಉಪಸ್ಥಿತರಿದ್ದರು. ಎನ್.ಆರ್.ಪುರದಲ್ಲಿ ಮಾಜಿ ಸಚಿವರಾದ Jeevaraj D N ರವರ ನೇತೃತ್ವದಲ್ಲಿ ಹಾಗೂ ಶೃಂಗೇರಿ ಹಾಗೂ ಬಾಳೆಹೊನ್ನೂರಿನಲ್ಲಿ ಸಹ ಶ್ರದ್ದಾಂಜಲಿಯನ್ನು ಸಲ್ಲಿಸಲಾಯಿತು ಮತ್ತು ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಭಜರಂಗದಳದ ಕಾರ್ಯಕರ್ತರು ಸಹ ಉಪಸ್ಥಿತರಿದ್ದು, ಇಸ್ಲಾಮಿಕ್ ಭಯೋತ್ಪಾದನಾ ದಾಳಿ ಯನ್ನು ತೀವ್ರ ವಾಗಿ ಖಂಡಸಿ ಮಾತನಾಡಿದರು.
ಕೊಪ್ಪ
ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಬಲಿಯಾದವರಿಗೆ ಶ್ರದ್ಧಾಂಜಲಿ
ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಬಲಿಯಾದ ಕೊಪ್ಪ ಮೂಲದ ಮಂಜುನಾಥ್ ರಾವ್ ಅವರಿಗೆ ಮತ್ತು ಇತರರಿಗೆ ಶ್ರದ್ಧಾಂಜಲಿ ಸಲ್ಲಿಕೆ.
Share this article
ಈ ವಿಭಾಗದ ಸುದ್ದಿಗಳು
ಕೊಪ್ಪ 108 ಅಂಬ್ಯುಲೆನ್ಸ್ ಸೇವೆ ಪುನಃ ಆರಂಭ
4 weeks ago
*ಸೇವೆಗೆ ಸಿಗದ ಅಂಬುಲೇನ್ಸ್* ಸಾರ್ವಜನಿಕರ ಪರದಾಟ
1 month ago
ಮಾರ್ಗಶಿರ ಪೂರ್ಣಿಮೆ ಪ್ರಯುಕ್ತ ವಿಶೇಷ ಔಷಧಿ ವಿತರಣೆ
1 month ago
" ರಾಷ್ಟ್ರೀಯ ಏಕತಾ ದಿನದ ಆಚರಣೆ ಅಂಗವಾಗಿ ಮ್ಯಾರಥಾನ್ "
2 months ago