ಕೊಪ್ಪ

*ಕೊಪ್ಪ ಆಯುರ್ವೇದ ಕಾಲೇಜು ಉಪನ್ಯಾಸಕಿ ಡಾ: ರಮ್ಯಶ್ರೀ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ 2ನೇ Rank*

ಎ‌.ಎಲ್.ರಾವ್.ಆಯುರ್ವೇದ ಕಾಲೇಜು ಉಪನ್ಯಾಸಕಿ ಡಾಃ ರಮ್ಯಶ್ರೀ ಗೆ ಸ್ನಾತಕೋತ್ತರ ವಿಭಾಗದಲ್ಲಿ ರಾಜೀವ್ ‌ಗಾಂಧಿ ವಿಶ್ವ ವಿದ್ಯಾಲಯದಲ್ಲಿ ಎರಡನೇ Rank.

avatar

  • April 24, 2025
  • 1 minute read
  • 8 Likes
  • 1290 Views
*ಕೊಪ್ಪ ಆಯುರ್ವೇದ ಕಾಲೇಜು ಉಪನ್ಯಾಸಕಿ  ಡಾ: ರಮ್ಯಶ್ರೀ   ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ 2ನೇ Rank*
*ಕೊಪ್ಪ ಆಯುರ್ವೇದ ಕಾಲೇಜು ಉಪನ್ಯಾಸಕಿ ಡಾ: ರಮ್ಯಶ್ರೀ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ 2ನೇ Rank*

ಕೊಪ್ಪದ ಪ್ರತಿಷ್ಠಿತ ಎ.ಎಲ್.ರಾವ್. ಕಾಲೇಜಿನಲ್ಲಿ ಆಯುರ್ವೇದ ಪದವಿ ಶಿಕ್ಷಣ ಮುಗಿಸಿ ಪ್ರಸ್ತುತ ಇದೇ ಕಾಲೇಜಿನಲ್ಲಿ ರೋಗ ನಿದಾನ ವಿಭಾಗದ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ: ರಮ್ಯಶ್ರೀ  ಇವರು ಉನ್ನತ ವ್ಯಾಸಂಗವನ್ನು  ಮೂಡುಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಮುಗಿಸಿದ್ದು. ಕಳೆದ ಶೈಕ್ಷಣಿಕ ವರ್ಷ ನಡೆದ ಅಂತಿಮ ವರ್ಷದ ಸ್ನಾತಕೋತ್ತರ ಆಯುರ್ವೇದ ವೈದ್ಯಕೀಯ ಪರೀಕ್ಷೆಯಲ್ಲಿ ರೋಗನಿದಾನ ಅಧ್ಯಯನ ವಿಷಯದಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಸ್ನಾತಕೋತ್ತರ  ಪರೀಕ್ಷೆಯಲ್ಲಿ ಶೇ 75.22 ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ವಿಶ್ವವಿದ್ಯಾಲಯಕ್ಕೆ 2ನೇ Rank ಪಡೆದಿರುತ್ತಾರೆ. ಇವರ ಈ ಸಾಧನೆಗೆ ಎ‌.ಎಲ್.ಎನ್.ರಾವ್. ಕಾಲೇಜು ಆಡಳಿತ ಮಂಡಳಿ ,ಪ್ರಾಂಶುಪಾಲರು ಮತ್ತು ಎಲ್ಲಾ ಪ್ರಾಧ್ಯಾಪಕರು ಅಭಿನಂದನೆ ತಿಳಿಸಿದ್ದಾರೆ. ಇವರು ಪ್ರಸ್ತುತ ಇದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತಿದ್ದು ,ಇವರಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಉಪಯೋಗ ದೊರಕಲಿ ಎಂದು ಹಾರೈಸಿದ್ದಾರೆ.

Gallery