ಕೊಪ್ಪ ಚಿಕ್ಕಮಗಳೊರು

ಎ.ಎಲ್.ಎನ್.ರಾವ್.ಕಾಲೇಜಿನ ವಿದ್ಯಾರ್ಥಿಗಳಿಗೆ ಕೇಂದ್ರೀಯ ಅಯರ್ವೇದ ವಿಜ್ಞಾನ ಪರಿಷತ್ತಿನಿಂದ ಪ್ರಶಸ್ತಿ:-

ಕೊಪ್ಪ ಎ.ಎಲ್.ಎನ್.ರಾವ್.ಕಾಲೇಜಿನ ವಿದ್ಯಾರ್ಥಿಗಳಿಗೆ ಕೇಂದ್ರೀಯ ಅಯರ್ವೇದ ವಿಜ್ಞಾನ ಪರಿಷತ್ತಿನಿಂದ ಪ್ರಶಸ್ತಿ:-

avatar

  • August 7, 2025
  • 1 minute read
  • 5 Likes
  • 505 Views
ಎ.ಎಲ್.ಎನ್.ರಾವ್.ಕಾಲೇಜಿನ ವಿದ್ಯಾರ್ಥಿಗಳಿಗೆ ಕೇಂದ್ರೀಯ ಅಯರ್ವೇದ ವಿಜ್ಞಾನ ಪರಿಷತ್ತಿನಿಂದ ಪ್ರಶಸ್ತಿ:-
ಎ.ಎಲ್.ಎನ್.ರಾವ್.ಕಾಲೇಜಿನ ವಿದ್ಯಾರ್ಥಿಗಳಿಗೆ ಕೇಂದ್ರೀಯ ಅಯರ್ವೇದ ವಿಜ್ಞಾನ ಪರಿಷತ್ತಿನಿಂದ ಪ್ರಶಸ್ತಿ:-

ಕೇಂದ್ರೀಯ ಆಯುರ್ವೇದ ವಿಜ್ಞಾನಗಳ ಸಂಶೋಧನಾ ಪರಿಷತ್ತು (ಸಿ.ಸಿ.ಆರ್.ಎ. ಎಸ್.) ನಿಂದ ಪ್ರತಿ ವರ್ಷ ಆಯುರ್ವೇದ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಸಂಶೋಧನೆಯ ಬಗ್ಗೆ ಆಸಕ್ತಿ ಮೂಡಿಸಲು ರಾಷ್ಟ್ರದಾದ್ಯಂತ ಆಯ್ದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಮೂಲಕ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಬಾರಿ ಮೂರನೇ ಸಾಲಿನ ಸಂಶೋಧನಾ ಆಯ್ಕೆ ಪ್ರಕ್ರಿಯೆಯಲ್ಲಿ, ಕೊಪ್ಪ ತಾಲ್ಲೂಕಿನ ಎ.ಎಲ್.ಎನ್.ರಾವ್ ಮೆಮೋರಿಯಲ್ ಆಯುರ್ವೇದ ಕಾಲೇಜಿನ ಐದು ವಿದ್ಯಾರ್ಥಿಗಳು ಆಯ್ಕೆಗೊಂಡು ಸಂಶೋಧನೆಯನ್ನು ಪೂರ್ಣಗೊಳಿಸಿ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಕಾಲೇಜಿನ ದ್ರವ್ಯ ಗುಣ ವಿಭಾಗದ ಪೂರ್ವ ಪ್ರಾಧ್ಯಾಪಕರಾದ  ಡಾ. ಎಚ್.ಆರ್.ಪ್ರದೀಪ್, ಡಾ. ಕೃಷ್ಣ ಕಿಶೋರ್ ಕುಮಾರ್, ಹಾಗೂ ರಸಶಾಸ್ತ್ರ ವಿಭಾಗದ ಡಾ.‌ಜಗದೀಶ ಮಯ್ಯ, ಡಾ. ಪ್ರಶಾಂತಿ ಕೆ, ಹಾಗೂ ಪಂಚಕರ್ಮ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪೂಜಾ ಹುಯಿಲಗೋಳ ಇವರು ಕ್ರಮವಾಗಿ  ವಿದ್ಯಾರ್ಥಿಗಳಾದ ಕುಮಾರಿ ಋಖಯ್ಯ, ಶ್ರೀ. ಶ್ರೀವತ್ಸ, ಕುಮಾರಿ ರಕ್ಷಿತಾ ಪಿ. ಕೆ., ಕುಮಾರಿ ವಿನುತಾ ಕೆ.ಆರ್., ಹಾಗೂ ಕುಮಾರಿ ಶೋಭಿತಾ ಪಿ. ಇವರಿಗೆ ಸಂಶೋಧಕಾ ಮಾರ್ಗದರ್ಶಕರಾಗಿ ಪ್ರಶಸ್ತಿ ಪಡೆಯಲು ಸಹಕರಿಸಿರುತ್ತಾರೆ. ಇವರಿಗೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಆರೂರು ರಮೇಶ ರಾವ್, ಟ್ರಸ್ಟಿಗಳಾದ ಶ್ರೀಮತಿ ಆರೂರು ನಮಿತಾ ರಾವ್, ಕಾಲೇಜಿನ ಪೂರ್ವ ಪ್ರಾಂಶುಪಾಲರಾದ ಶ್ರೀ ಸಂಜಯ ಕೆ.ಎಸ್. ಇವರು ಅಭಿನಂದನೆ ಸಲ್ಲಿಸಿರುತ್ತಾರೆ.