*ಕೊಪ್ಪದ ಎಲ್ಲಾ ಕುಡಿಯುವ ನೀರು ಆರೋಗ್ಯಕ್ಕೆ ಅಪಾಯಕಾರಿ - ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದ ಭಯಾನಕ ವರದಿ*
ಕೊಪ್ಪದ ಎಲ್ಲಾ ಕುಡಿಯುವ ನೀರು ಆರೋಗ್ಯಕ್ಕೆ ಅಪಾಯಕಾರಿ ಎಂದು ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದ ಭಯಾನಕ ವರದಿ ಬಂದಿದ್ದು, ಕೊಪ್ಪದ ಸಾರ್ವಜನಿಕರು ನಲ್ಲಿಯಲ್ಲಿ ಬರುವ ಕುಡಿಯುವ ನೀರನ್ನು ಕುಡಿಯುವ ಮುನ್ನ ಯೋಚಿಸಬೇಕಿದೆ.
ಇತ್ತೀಚೆಗೆ ನಲ್ಲಿಯಲ್ಲಿ ಕಲ್ಮಶಗಳನ್ನು ಹೊತ್ತು ಬಂದಾಗ ಸಾರ್ವಜನಿಕರು ಗಾಬರಿಯಾಗಿ, ಕುಡಿಯುವ ನೀರನ್ನು ಪರೀಕ್ಷೆಗೆ ಒಳಪಡಿಸಲು ಒತ್ತಾಯಿಸಿದ್ದು, ಈಗ ವರದಿ ಬಂದಿರುತ್ತದೆ.
ಮತ್ತೊಮ್ಮೆ ಪಟ್ಟಣ ಪಂಚಾಯತಿಯ ಕೊಳಕು ನೀರನ್ನು ವಿತರಿಸುವಲ್ಲಿನ ಬೇಜವಬ್ದಾರಿತನ, ನಿರ್ಲಕ್ಷ, ನಿಷ್ಕ್ರಿಯತೆ, ಇರಬಹುದಾದ ಭ್ರಷ್ಟತೆಗೆ ಹಿಡಿದ ಕನ್ನಡಿ ಎಂಬಂತೆ, ನೀರಿನಲ್ಲಿ ಅಪಾಯಕಾರಿ ಮಟ್ಟದಲ್ಲಿರುವ ಬ್ಯಾಕ್ಟೀರಿಯಗಳ ಕರ್ಮಕಾಂಡ ಬಯಲಿಗೆ ಬಂದಂತಿದೆ.
ಕೊಪ್ಪದ ಮೂಲಭೂತ ಸೌಕರ್ಯಗಳ ವಿಷಯದಲ್ಲಿ ಗೌರವಾನ್ವಿತ ಪಂಚಾಯತಿ ಸದಸ್ಯರು ಮತ್ತು ಗೌರವಾನ್ವಿತ ಅಧಿಕಾರಿಗಳು ಏನಾದರು ಕ್ರಮ ಕೈಗೊಳ್ಳುತ್ತಾರಾ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಈಗಾಗಲೇ ಹಿರೀಕೆರೆ ಮೇಲ್ಬಾಗದಲ್ಲಿ ನಿರ್ಮಾಣ ಆಗುತ್ತಿರವ ಲೇಔಟ್ ಬಗ್ಗೆ ಹಲವಾರು ಹೋರಾಟ ನಡೆದಿದ್ದು, ಇದರ ಪರಿಣಾಮವೇ ನೀರು ಕಲುಷಿತವಾಗಲು ಕಾರಣ ಎಂದು ಜನತೆ ಮಾತನಾಡುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಕೂಡಲೇ ಲೇಔಟ್ ಕಾಮಗಾರಿ ನಿಲ್ಲಿಸುವಂತೆ ಇಂದು ಪುರಭವನದಲ್ಲಿ ನಡೆದ ಸಭೆಯಲ್ಲಿ ಒತ್ತಾಯಿಸದ ಬಗ್ಗೆ ಮಾಹಿತಿ ಲಭ್ಯವಾಗಿದ್ದು. ಮುಂದಿನ ತೀರ್ಮಾನಕ್ಕೆ ಕಾದು ನೋಡಬೇಕಾಗಿದೆ.
ಇನ್ನದಾರು ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚತ್ತು ಕೊಪ್ಪ ದ ಜನತೆಗೆ ಉತ್ತಮ ನೀರು ಸರಬರಾಜು ಆಗುವವರೆಗೆ ಪರ್ಯಾಯ ವ್ಯವಸ್ಥೆ ಮಾಡಿ ತಕ್ಷಣವೇ ಪ್ರಯೋಗಾಲಯದ ವರದಿ ಬಂದ ನೀರನ್ನು ನಿಲ್ಲಿಸಲು ಕೊಪ್ಪ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.