ಕೊಪ್ಪ

*ಲಯನ್ಸ್ ಸೇವಾ ಮಂದಿರದ ಎದುರು ರಸ್ತೆ ಬದಿ ವಾಹನ ನಿಲುಗಡೆಗೆ ಆಕ್ಷೇಪ*

ಕೊಪ್ಪ ಪಟ್ಟಣದ ಕಾಳಿದಾಸ ರಸ್ತೆಯ ಲಯನ್ಸ್ ಸೇವಾ ಮಂದಿರದ ಎದುರು ರಸ್ತೆ ಪಕ್ಕ ವಾಹನ ನಿಲುಗಡೆ ಸಾರ್ವಜನಿಕರಿಗೆ ನಿತ್ಯ ಕಿರಿ ಕಿರಿ.

avatar

  • May 14, 2025
  • 1 minute read
  • 6 Likes
  • 372 Views
*ಲಯನ್ಸ್ ಸೇವಾ ಮಂದಿರದ ಎದುರು ರಸ್ತೆ ಬದಿ ವಾಹನ ನಿಲುಗಡೆಗೆ ಆಕ್ಷೇಪ*
*ಲಯನ್ಸ್ ಸೇವಾ ಮಂದಿರದ ಎದುರು ರಸ್ತೆ ಬದಿ ವಾಹನ ನಿಲುಗಡೆಗೆ ಆಕ್ಷೇಪ*

ಸಂಬಂಧಪಟ್ಟ ಬಿಂತ್ರವಳ್ಳಿ ಗ್ರಾಮ ಪಂಚಾಯತಿಗೂ ಸಹ ಈ ಬಗ್ಗೆ ಕ್ರಮ ಕೈಗೊಳ್ಳಲು ಸಾರ್ವಜನಿಕರು ದೂರು ಕೊಟ್ಟರು ಸಹ ಇದುವರೆಗೂ ಏನೂ ಉಪಯೋಗ ಆಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಮಸ್ಯೆ ವರ್ಷದಲ್ಲಿ ಹತ್ತು ತಿಂಗಳು ಅನುಭವಿಸಬೇಕು, ಆಸ್ಪತ್ರೆಗೆ ಹೋಗುವಾಗ ರಸ್ತೆ ಬದಿ ಟ್ರಾಫಿಕ್ ಜಾಮ್ ಆಗಿ ರೋಗಿ ಸತ್ತರೆ ಯಾರು ಹೊಣೆ? ಹಾಗೂ ಕಛೇರಿಗಳಿಗೆ ತೆರಳುವು ಸಿಬ್ಬಂದಿಗಳಿಗೆ ಊಟದ ಸಮಯ ಇರುವುದೇ ಕೇವಲ ಅರ್ಧ ಗಂಟೆ ,ಮನೆಗೆ ತೆರಳಲು ಆಗದೆ ಊಟ ಮಾಡಲು ಆಗದೆ ಕಭೇರಿಗೆ ಹೋಗಬೇಕಾದ ಅನಿವಾರ್ಯ ಉಂಟಾಗಿ ಬಹಳ ಸಮಸ್ಯೆ ಉಙಟಾಗಿದೆ ಎಂದು ಇವರು ಸಹ ತಮ್ಮ ಅಳಲು ತೋಡಿಕೊಂಡಿದ್ದಾರೆ. ದಯವಿಟ್ಟು ಸಂಭದಪಟ್ಟ ಗ್ರಾಮ ಪಂಚಾಯತಿ ಮತ್ತು ಪೋಲಿಸ್ ಇಲಾಖೆ ಲಯನ್ಸ್ ಸೇವಾ ಮಂದಿರದ ವ್ಯವಸ್ಥಾಪರಿಗೆ ಸ್ಪಷ್ಟ ನಿರ್ದೇಶನ ನೀಡಿ ಕಾರ್ಯಕ್ರಮಕ್ಕೆ ನೀಡುವ ಮುನ್ನ ಕಾರ್ಯಕ್ರಮ ನಡೆಸುವವರಿಗೆ ವಾಹನ ನಿಲುಗಡೆ ಮಾಡಲು ಸೆಕ್ಯೂರಿಟಿ ನೇಮಿಸಿಕೊಳ್ಳಲು ಮತ್ತು ಮಂದಿರದ ಒಳಗೆ ನಿಲುಗಡೆ ಮಾಡಲು ತಿಳಿಸಬೇಕು . ಇಲ್ಲವಾದಲ್ಲಿ ಪಂಚಾಯತಿ ಮತ್ತು ಪೋಲಿಸ್ ಇಲಾಖೆ ಲಯನ್ಸ್ ಮಂದಿರದ ವ್ಯವಸ್ಥಾಪಕರಿಗೆ ದಂಡ ವಿಧಿಸಿ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ‌ ಮಾಡಿದ್ದಾರೆ.

Gallery