ಕೊಪ್ಪ ಕುದುರೆಗುಂಡಿ Sringeri ಜಯಪುರ ತೀರ್ಥಹಳ್ಳಿ ಚಿಕ್ಕಮಗಳೊರು

ಪ್ಲಾಸ್ಟಿಕ್ ತ್ಯಾಜ್ಯ ತಿಂದು ಏಳು ತಿಂಗಳ ಗಬ್ಬದ ಹಸು ಕರು ಸಮೇತ ಸಾವು: ಹೊಟ್ಟೆಯಲ್ಲಿ ಸಿಕ್ಕಿತು ಒಂದು ಚೀಲ ಪ್ಲಾಸ್ಟಿಕ್!

ಕೊಪ್ಪ: ಎಲ್ಲೆಂದರಲ್ಲಿ ಎಸೆಯುವ ಪ್ಲಾಸ್ಟಿಕ್ ತ್ಯಾಜ್ಯವನ್ನು ತಿಂದ ಪರಿಣಾಮ ಏಳು ತಿಂಗಳ ಗಬ್ಬದ ಹಸುವೊಂದು ಕರು ಸಮೇತ ಮೃತಪಟ್ಟಿರುವ ಮನಕಲಕುವ ಘಟನೆ ತಾಲೂಕಿನ ಕಾಚ್ಗಲ್‌ನಲ್ಲಿ ನಡೆದಿದೆ.

ಪ್ಲಾಸ್ಟಿಕ್ ತ್ಯಾಜ್ಯ ತಿಂದು ಏಳು ತಿಂಗಳ ಗಬ್ಬದ ಹಸು ಕರು ಸಮೇತ ಸಾವು: ಹೊಟ್ಟೆಯಲ್ಲಿ ಸಿಕ್ಕಿತು ಒಂದು ಚೀಲ ಪ್ಲಾಸ್ಟಿಕ್!

  • November 18, 2026
  • 1 minute read
  • 2 Likes
  • 157 Views
ಪ್ಲಾಸ್ಟಿಕ್ ತ್ಯಾಜ್ಯ ತಿಂದು ಏಳು ತಿಂಗಳ ಗಬ್ಬದ ಹಸು ಕರು ಸಮೇತ ಸಾವು: ಹೊಟ್ಟೆಯಲ್ಲಿ ಸಿಕ್ಕಿತು ಒಂದು ಚೀಲ ಪ್ಲಾಸ್ಟಿಕ್!
ಪ್ಲಾಸ್ಟಿಕ್ ತ್ಯಾಜ್ಯ ತಿಂದು ಏಳು ತಿಂಗಳ ಗಬ್ಬದ ಹಸು ಕರು ಸಮೇತ ಸಾವು: ಹೊಟ್ಟೆಯಲ್ಲಿ ಸಿಕ್ಕಿತು ಒಂದು ಚೀಲ ಪ್ಲಾಸ್ಟಿಕ್!

ಸ್ಥಳೀಯ ಆಡಳಿತದ ವಿರುದ್ಧ ಗ್ರಾಮಸ್ಥರ ಆಕ್ರೋಶ; ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ

​ಕೊಪ್ಪ: ಎಲ್ಲೆಂದರಲ್ಲಿ ಎಸೆಯುವ ಪ್ಲಾಸ್ಟಿಕ್ ತ್ಯಾಜ್ಯವನ್ನು ತಿಂದ ಪರಿಣಾಮ ಏಳು ತಿಂಗಳ ಗಬ್ಬದ ಹಸುವೊಂದು ಕರು ಸಮೇತ ಮೃತಪಟ್ಟಿರುವ ಮನಕಲಕುವ ಘಟನೆ ತಾಲೂಕಿನ ಕಾಚ್ಗಲ್‌ನಲ್ಲಿ ನಡೆದಿದೆ.

​ಕಾಚ್ಗಲ್ ನಿವಾಸಿ ಲೋಕಪ್ಪ ಗೌಡ ಅವರ ಪುತ್ರ, ಪೋಸ್ಟ್ ಮಾಸ್ಟರ್ ಮಹೇಶ್ಚಂದ್ರ ಅವರಿಗೆ ಸೇರಿದ ಹಸು ಇದಾಗಿದೆ. ಕಳೆದ ಕೆಲ ದಿನಗಳಿಂದ ಹಸುವಿನ ಹೊಟ್ಟೆ ಅತಿಯಾಗಿ ಉಬ್ಬಿಕೊಂಡಿದ್ದರಿಂದ ಅನುಮಾನಗೊಂಡ ಮಾಲೀಕರು ಪಶುವೈದ್ಯರನ್ನು ಕರೆಸಿ ತಪಾಸಣೆ ನಡೆಸಿದ್ದರು. ಹಸು ಮೃತಪಟ್ಟ ಬಳಿಕ ಪಶುವೈದ್ಯ ಡಾ. ಪ್ರದೀಪ್ ಅವರು ಮರಣೋತ್ತರ ಪರೀಕ್ಷೆ ನಡೆಸಿದಾಗ, ಹಸುವಿನ ಹೊಟ್ಟೆಯಲ್ಲಿ ಬರೋಬ್ಬರಿ ಒಂದು ಗೊಬ್ಬರದ ಚೀಲದಷ್ಟು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗಿರುವುದು ಪತ್ತೆಯಾಗಿದೆ. ಇದನ್ನು ಕಂಡ ವೈದ್ಯರು ಹಾಗೂ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

​ಗ್ರಾಮಸ್ಥರ ಆತಂಕ ಮತ್ತು ಆಕ್ರೋಶ:

"ಕಾಚ್ಗಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರತಿದಿನ ಮೂಟೆಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಮೇಯಲು ಹೋಗುವ ಜಾನುವಾರುಗಳು ಮತ್ತು ಕರುಗಳು ಆಹಾರದೊಂದಿಗೆ ಈ ಪ್ಲಾಸ್ಟಿಕ್ ತಿನ್ನುತ್ತಿವೆ. ಇದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಜಾನುವಾರುಗಳು ಪ್ರಾಣ ಕಳೆದುಕೊಳ್ಳುವ ಭೀತಿ ಎದುರಾಗಿದೆ" ಎಂದು ಸ್ಥಳೀಯ ಜಾನುವಾರು ಸಾಕಾಣಿಕೆದಾರರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

​ಬೀದಿ ಬದಿಯಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಆಡಳಿತ ತಕ್ಷಣವೇ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ತ್ಯಾಜ್ಯ ವಿಲೇವಾರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


ಸಂಬಂಧಿತ ಸುದ್ದಿಗಳು

*ಬದಲಾಗುತ್ತಾ ಶೃಂಗೇರಿ ಚುನಾವಣಾ ಕ್ಷೇತ್ರದ ಚಿತ್ರಣ*

*ಮೇ 2 ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಮರು ಮತ ಎಣಿಕೆ ಕಾರ್ಯ ಎಲ್ಲರ ಚಿತ್ತ ಶೃಂಗೇರಿ ವಿಧಾನ ಸಭಾ ಕ್ಷೇತ್ರದತ್ತ*.

*ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ*

ಮೇ 03 ಕ್ಕೆ ಕೊಪ್ಪದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ ನವಚೈತ್ರ ಆರೋಗ್ಯ ಕಾಳಜಿ ಶಿಬಿರ 208 ರ ಅಂಗವಾಗಿ ಲಯನ್ಸ್ ಸಹ್ಯಾದ್ರಿ ಕೊಪ್ಪ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) (ಬಿ.ಸಿ. ಟ್ರಸ್ಟ್), ಎನ್.ಆ‌ರ್.ಪುರ - ಕೊಪ್ಪ ಮಾಲೀಕರು ವಿಕಾಸ್ ಬೇಗನೆ ಯವರ ಬೇಗಾನೆ ಫಾರಂ, ಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಸಾದ್‌ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ಇವರಿಂದ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾಶಿಬಿರ ಹಾಗೂ ಜಸ್ಟೀಸ್ ಕೆ.ಎಸ್.ಹೆಗಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ, ಮಂಗಳೂರು ಇವರಿಂದ ಬೃಹತ್ ಉಚಿತ ಆರೋಗ್ಯ ಶಿಬಿರವು ಮೇ 03 ರಭಾನುವಾರ ಬೆಳಿಗ್ಗೆ ಘಂಟೆ 9-00 ರಿಂದ ಮಧ್ಯಾಹ್ನ 1-00 ವರೆಗೆ ಕೊಪ್ಪ ಮುಖ್ಯ ರಸ್ತೆಯ ಪಿಎಂಶ್ರೀ ಕೆ.ಪಿ.ಎಸ್. ಪಟ್ಟಣ ಶಾಲೆಯ ಸಭಾಂಗಣದಲ್ಲಿ ನಡಯಲಿದೆ

*ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ವ್ಯಕ್ತಿ*

ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ವ್ಯಕ್ತಿ* ಕೊಪ್ಪ ದಲ್ಲಿ ಮೊದಲ ಬಾರಿ ಪ್ರಶಮನಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆದ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ.