ಕಲೆ ಮತ್ತು ಸಂಸ್ಕೃತಿ ಕೊಪ್ಪ

"ಸಾಂಸ್ಕೃತಿಕ ವೈಭವ 2025 " ಅದ್ದೂರಿಯಾಗಿ ತೆರೆ.

ಕೊಪ್ಪ ಎ.ಎಲ್.ಎನ್.ರಾವ್.ಕಾಲೇಜು ಸಾಂಸ್ಕೃತಿಕ ವೈಭವ 2025 ಅದ್ದೂರಿಯಾಗಿ ನಡೆಯಿತು.

avatar

  • June 10, 2025
  • 1 minute read
  • 4 Likes
  • 346 Views
"ಸಾಂಸ್ಕೃತಿಕ ವೈಭವ 2025 " ಅದ್ದೂರಿಯಾಗಿ ತೆರೆ.
"ಸಾಂಸ್ಕೃತಿಕ ವೈಭವ 2025 " ಅದ್ದೂರಿಯಾಗಿ ತೆರೆ.

ಕೊಪ್ಪ ಎ.ಎಲ್.ಎನ್. ರಾವ್ ಆಯುರ್ವೇದ ಕಾಲೇಜಿನಲ್ಲಿ "ಸಾಂಸ್ಕೃತಿಕ ವೈಭವ"2025.

ಕೊಪ್ಪದ ಎ.ಎಲ್.ಎನ್.ರಾವ್ .ಆಯುರ್ವೇದ ಕಾಲೇಜು ಸಭಾಂಗಣದಲ್ಲಿ ಜೂನ್ 3 ರಿಂದ ಜೂನ್ 9 ರವರೆಗೆ "ಸಾಂಸ್ಕೃತಿಕ ವೈಭವ " 2025 ನಡೆಯಿತು. ಈ ಪ್ರಯುಕ್ತ ನಾಲ್ಕು ದಿನಗಳ ಕಾಲ ವೈದ್ಯಕೀಯ ವಿಧ್ಯಾರ್ಥಿಗಳಿಗೆ ಹಲವಾರು ಸಾಂಸ್ಕೃತಿಕ ಮತ್ತು ಕಲಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸೋಮವಾರ ಜೂನ್ 9 ರಂದು ಕಾಲೇಜು ಸಭಾಂಗಣದಲ್ಲಿ "ಸಾಂಸ್ಕೃತಿಕ ವೈಭವ" 2025 ರ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಖ್ಯಾತ ಯಕ್ಷಗಾನ ಕಲಾವಿದ" ರಾಜ್ಯ ಯಕ್ಷ ಸಿರಿ " ಪ್ರಶಸ್ತಿ ವಿಜೇತರಾದ ಶ್ರೀ ಅನಂತ ಪದ್ಮನಾಭ ರಾವ್ ( ಅಣ್ಣಾಜಿ ಸೀತೂರು) ಇವರು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಇವರು ನಮ್ಮ ಸಂಸ್ಕೃತಿಗಳ ಉಳಿವಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಬಹಳ ಅತ್ಯಗತ್ಯ ಎಂದರು .ಪ್ರತಿಯೊಬ್ಬ ಮನುಷ್ಯನಿಗೆ ಧರ್ಮ ಎಷ್ಟು ಮುಖ್ಯವೋ ಅದನ್ನು ಉಳಿಸಲು ಸಂಸ್ಕೃತಿ ಸಹ ಅಷ್ಟೇ ಮುಖ್ಯ ಎಂದರು. ಆರೂರ್ ರಮೇಶ್ ರಾವ್ ಅವರಂತಹ ಮೇರು‌ ವ್ಯಕ್ತಿಗಳು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣದ ಮೂಲಕ ಸಂಸ್ಕೃತಿಯ ಉಳಿವಿಗಾಗಿ ಇಂತಹ ಒಳ್ಳೆಯ ಶಿಕ್ಷಣ ಸಂಸ್ಥೆ ಮಲೆನಾಡು ಭಾಗದಲ್ಲಿ ಆರಂಭಿಸಿದರು. ಈಗ ಅದನ್ನು ಅವರ ಮೊಮ್ಮಗಳು ಮತ್ತು ಟ್ರಸ್ಟಿ ಶ್ರೀ ಮತಿ ನಮಿತಾ ರಾವ್ ಅವರು ಮುಂದುವರೆಸುತ್ತಿರುವುದು ಬಹಳ ಹೆಮ್ಮೆಯ ವಿಷಯ ಎಂದರು.ನಂತರ ಶ್ರೀ ಅನಂತ ಪದ್ಮನಾಭ ರಾವ್ ಇವರನ್ನು ಕಾಲೇಜು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾಲೇಜು ಟ್ರಸ್ಟಿಗಳಾದ ಶ್ರೀ ಮತಿ ನಮಿತಾ ರಾವ್ ಅವರು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿ ನಮ್ಮ ವಿಧ್ಯಾರ್ಥಿಗಳು ಓದುವುದರಲ್ಲಿ ಮಾತ್ರವಲ್ಲದೆ ಸಾಂಸ್ಕೃತಿಕ ಪ್ರದರ್ಶನವನ್ನು ಸಹ ಉತ್ತಮವಾಗಿ ನೀಡುತ್ತಿರುವುದು ಬಹಳ ಸಂತೋಷ ತಂದಿದೆ‌ ಎಂದರು. ಕಳೆದ ವರ್ಷ ಉತ್ತಮ ಅಂಕ ಪಡೆದ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ಕು.ವಿಜೇತಾ ಪ್ರಭು ಅವರಿಗೆ ನೀಡಲಾಯಿತು. ಹಾಗೂ ಉತ್ತಮ ಅಂಕಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಯಿತು. ಮಧ್ಯಾಹ್ನ  ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರುಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಮನರಂಜಿಸಿದರು.
ಕಾರ್ಯಕ್ರಮದಲ್ಲಿ  ಕಾಲೇಜು ಪ್ರಾಂಶುಪಾಲರಾದ ಡಾ ಸಂಜಯ ಕೆ‌.ಎಸ್. ಉಪ ಪ್ರಾಂಶುಪಾಲರಾದ ಡಾ.ಪ್ರದೀಪ್ ಹೆಚ್.ಆರ್‌,ಡಾ ಡಿ.ಕೆ.ಮಿಶ್ರಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ನಿರ್ದೇಶಕ. ಡಾ ಮಂಜುನಾಥ್ ಹೆಗ್ಡೆ ಸೇರಿದಂತೆ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.