ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವಕ್ಕೆ ಅದ್ಧೂರಿ ತೆರೆ.
ಕೊಪ್ಪದ ಆರೂರು ವಿದ್ಯಾ ಸಂಸ್ಥೆಯ ಆವರಣದ ರಾಘವೇಂದ್ರ ಸ್ವಾಮಿ ಮಠದಲ್ಲಿ 3 ದಿನಗಳ ಕಾಲ ಅಂದರೆ ದಿನಾಂಕ ಆಗಸ್ಟ್ 10,11, ಮತ್ತು 12 ರಂದು,ಪೂರ್ವಾರಾಧನೆ, ಮಧ್ಯಾರಾಧನೆ ಹಾಗೂ ಉತ್ತರಾರಾಧನೆಯು ಬೆಳಗಿನ ಅಷ್ಟೋತ್ತರ ಪಾರಾಯಣ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ಮತ್ತು ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ, ಸಾಯಂಕಾಲ ಯಕ್ಷಗಾನ ತಾಳಮದ್ದಲೆ, ವಿವಿಧ ಸಂಗೀತ ಶಾಲೆಗಳ ಕಲಾವಿದರಿಂದ ಸಂಗಿತ ಕಾರ್ಯಕ್ರಮ, ಭಜನಾ ಮಂಡಳಿಗಳಿಂದ ದೇವರ ನಾಮ ಕೀರ್ತನೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು , ಪಲ್ಲಕ್ಕಿ ಉತ್ಸವ , ಅಷ್ಟಾವಧಾನ ಸೇವೆಗಳು ಜರುಗಿದವು.
ಸಾವಿರಾರು ಜನರು ಈ ಸತ್ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ಗುರು ರಾಯರ ಕೃಪಾಶೀರ್ವಾದಕ್ಕೆ ಪಾತ್ರರಾದರು.
ಸಂಸ್ಥೆಯ ಮುಖ್ಯಸ್ಥರಾದ ಆರೂರು ಶ್ರೀ ರಮೇಶರಾವ್ ಅವರ ಕುಟುಂಬವು ಪ್ರತೀವರ್ಷದಂತೆ ಈ ವರ್ಷವೂ ಎಲ್ಲಾ ಕಾರ್ಯಕ್ರಮಗಳು ನಿರ್ವಿಘ್ನವಾಗಿ ನೆರವೇರಲು ಸಹಕರಿಸಿದರು. ಹಾಗೂ ವಿವಿಧ ಭಕ್ತರು ಸಹ ಸೇವಾ ರೂಪದಲ್ಲಿ ಸಹಕರಿಸಿ ,ಶ್ರೀ ರಾಘವೇಂದ್ರ ಗುರುಗಳ ಆರಾಧನಾ ಮಹೋತ್ಸವ ಯಶಸ್ವಿಯಾಗಿ ಸಂಪನ್ನಗೊಳ್ಳಲು ಕಾರಣೀಭೂತರಾದರು.